ಶುಚಿತ್ವದಿಂದ ಆರೋಗ್ಯ ಸಂರಕ್ಷಣೆ

Health protection through cleanliness
ಕೆರೂರ ಸಮೀಪದ ಕೈನಕಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆರೋಗ್ಯ ಅರಿವು ಕಾರ್ಯಕ್ರಮ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಲಾಯಿತು. ಆಪ್ತ ಸಮಾಲೋಚಕಿ ಲಕ್ಷ್ಮೀ ಹೂಲಸಗೇರಿ, ಶಿವಾನಂದ ಕಾರಿ, ಶಾಲೆ ಮುಖ್ಯಶಿಕ್ಷಕಿ ಎಸ್. ಎನ್. ಕನಮಡಿ ಇತರರಿದ್ದರು.
Published on

ಕೆರೂರ : ವಯಸ್ಸಿನ ಹೆಣ್ಣು ಮಕ್ಕಳು ಋತುಸ್ರಾವದ ವೇಳೆ ಶುಚಿತ್ವ ಕಾಪಾಡಿಕೊಳ್ಳಬೇಕೆಂದು ಆರೋಗ್ಯ ಆಪ್ತ ಸಮಾಲೋಚಕಿ ಲಕ್ಷ್ಮೀ ಹೂಲಸಗೇರಿ ಹೇಳಿದರು.

ಸಮೀಪದ ಕೈನಕಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ಅರಿವು ಕಾರ್ಯಕ್ರಮದ ಕುರಿತು ಮಾತನಾಡಿ, ಹೆಣ್ಣು ಮಕ್ಕಳು ಬಾಲ್ಯ ವಿವಾಹಕ್ಕೆ ಒಳಗಾಗದೆ ಹೆಚ್ಚು ಓದಿನ ಕಡೆ ಗಮನ ಹರಿಸಿ ಉನ್ನತ ಸ್ಥಾನ ಪಡೆದುಕೊಳ್ಳಬೇಕು ಎಂದರು.

ಆರೋಗ್ಯ ಇಲಾಖೆ ಸಿಬ್ಬಂದಿ ಶಿವಾನಂದ ಕಾರಿ ಹದಿ ಹರೆಯದ ಮಕ್ಕಳಿಗೆ ಆರೋಗ್ಯದ ಸಮಸ್ಯೆಗಳು ಹಾಗೂ ಪೌಷ್ಟಿಕ ಆಹಾರ ಕುರಿತು ಮಾಹಿತಿ ನೀಡಿದರು.

ಶಾಲೆ ಮುಖ್ಯ ಶಿಕ್ಷಕಿ ಎಸ್. ಎನ್. ಕನಮಡಿ, ಬಸವರಾಜ ಕುಂಬಾರ, ಸಿದ್ದರಾಮ ಬಿ., ಆರೋಗ್ಯ ಇಲಾಖೆ ಸಿಬ್ಬಂದಿ ಏಕನಾಥ ಇರಕಲ್ಲ, ಶಾಂತಾ ಹೊಸಗೌಡ್ರ, ಗೀತಾ ದುತ್ತರಗಿ, ಆರ್. ಐ. ನಡಗಡ್ಡಿ, ವೈ. ವಿ. ಗಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net