ಸಿರಿಧಾನ್ಯದಿಂದ ಆರೋಗ್ಯ ವೃದ್ಧಿ

Falicitating Programme
Published on

ನವಲಗುಂದ: ಅದ್ಭುತ ಆರೋಗ್ಯ ಮತ್ತು ರೋಗನಿವಾರಕ ಅಂಶಗಳನ್ನು ಹೊಂದಿರುವ ಒಂಬತ್ತು ಬಗೆಯ ಏಕದಳ ಧಾನ್ಯಗಳನ್ನು ಆರಿಸಿಕೊಂಡು ಅವುಗಳಿಗೆ ಸಿರಿ ಧಾನ್ಯಗಳೆಂಬ ಹೆಸರನ್ನಿಟ್ಟು ರಾಜ್ಯದ ವಿವಿಧೆಡೆ ಆಹಾರ ಮೇಳ ನಡೆಸಲಾಗುತ್ತಿದೆ ಎಂದು ಡಯಟ್ ಹಿರಿಯ ಉಪನ್ಯಾಸಕ ಎ.ಎ. ಖಾಜಿ ಹೇಳಿದರು.

ಪ್ರಧಾನ ಮಂತ್ರಿ ಪೋಷಣ ಅಭಿಯಾನದಡಿ ಎಚ್.ಪಿ. ಎಸ್ ಬಳ್ಳುರ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಿರಿಧಾನ್ಯ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಡಯಟ್ ಉಪನ್ಯಾಸಕರಾದ ವಿಜಯಲಕ್ಷ್ಮೀ ಹಂಚಿನಾಳ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಬಿ. ಕೊಪ್ಪದ, ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷ ಗಣೇಶ ವಿ. ಹೊಳೆಯನ್ನವರ, ಆರ್.ಬಿ. ಯರಳಿ, ಆರ್.ಬಿ. ಮುರಾನಾಳ, ಎಂ.ಎಸ್. ಹುಗ್ಗಿ, ವಿ.ಎಚ್. ಚಾಕಲಬ್ಬಿ, ಪಿ.ಸಿ. ಸೂರಪ್ಪನವರ, ಎಸ್​ಡಿಎಂಸಿ ಪದಾಧಿಕಾರಿಗಳು , ಗ್ರಾಮ ಪಂಚಾಯಿತಿ ಸದಸ್ಯರು, ಶಾಲಾ ಪ್ರಧಾನ ಗುರುಗಳು, ಸಹಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net