ಮದುವೆ ಸಮಾರಂಭದಲ್ಲಿ ವಿಷಹಾರ ಸೇವನೆ ನೂರಾರು ಜನರು ಅಸ್ತವ್ಯಸ್ತ

IMG-20230829-WA0008.jpg
Published on

ಬೆಳಗಾವಿ:ತಾಲೂಕಿನ ಹಿರೇಕೂಡಿ ಗ್ರಾಮದಲ್ಲಿ ಜರುಗಿದ ಮದುವೆ ಸಮಾರಂಭದಲ್ಲಿ ವಿಷಹಾರ ಊಟ ಸೇವಿಸಿ  ಸುಮಾರು ನೂರಾರು ಜನರು ಅಸ್ತವ್ಯಸ್ತವಾಗಿರುವ ಘಟನೆ ಸಂಭವಿಸಿದೆ.
ಹಿರೇಕೂಡಿ ಯ ಪಟೇಲ ಎಂಬುವವರ ಮನೆಯಲ್ಲಿ ಜರುಗಿದ ಮದುವೆ ಸಭಾರಂಭದಲ್ಲಿ ಊಟ ಸೇವಿಸಿ ಜನ ವಾಂತಿಭೇದಿಯಿಂದ ತತ್ತರಿಸಿದ್ದೂ, ಮಂಗಳವಾರ ಬೆಳಗಿವ ವೇಳೆ ಅಸ್ವಸ್ಥಗೊಂಡಿರುವವರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಕೆಲವರನ್ನು ಮಿರಜ್  ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮದುವೆ ಸಮಾರಂಭಕ್ಕೆ ಮಹಾರಾಷ್ಟ್ರದ ಮಿರಜ್‌ನಿಂದಲೂ ಸಂಬಂಧಿಕರು ಆಗಮಿಸಿದ್ದರು. ಮದುವೆ ಸಮಾರಂಭದಲ್ಲಿ ಊಟ ಮಾಡಿ ಮನೆಗೆ ವಾಪಾಸ್ ಆಗುತ್ತಿದ್ದಂತೆ ಕೆಲ ಜನರಿಗೆ ವಾಂತಿ-ಭೇದಿಯಾಗಿದೆ. ತಡರಾತ್ರಿ ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದಿದ್ದು ಅನೇಕರು ರಾತ್ರಿಯೇ ತಮ್ಮ ಗ್ರಾಮದ ಸುತ್ತಮುತ್ತಲಿನ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಹಿರೇಕೋಡಿ ಗ್ರಾಮಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದು ಸರ್ಕಾರಿ ಶಾಲೆಯಲ್ಲಿ ಬೀಡುಬಿಟ್ಟು ತಪಾಸಣೆ ನಡೆಸುತ್ತಿದ್ದಾರೆ ಎಂದು ಎಸ್ಪಿ ಡಾ. ಸಂಜೀವ ಪಾಟಿಒಲ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net