ಅಡುಗಡೆ ಅನಿಲ ಬಳಕೆಯಿಂದ ಆರೋಗ್ಯದಲ್ಲಿ ಏರುಪೇರು

31.hgr1
ಹಲಗೂರಿನ ಸಪ್ತಗಿರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಸ್ತು ಪ್ರದರ್ಶನವನ್ನು ಅತಿಥಿಗಳು ವೀಕ್ಷಣೆ ಮಾಡಿದರು. ಶಶಿಕಲಾ ಶ್ರೀನಿವಾಸ್‌ಆಚಾರಿ, ಗಿರಿಗೌಡ, ಬಿ. ತಾ, ಎಂ .ಎನ್. ಪುನೀತ್ ಇತರರು ಇದ್ದರು.
Published on

ಹಲಗೂರು: ಚನ್ನಪಟ್ಟಣ ರಸ್ತೆಯಲ್ಲಿರುವ ಸಪ್ತಗಿರಿ ಪ್ರೌಢಶಾಲೆಯಲ್ಲಿ ಶುಕ್ರವಾರ ವಸ್ತುಪ್ರದರ್ಶನ ಆಯೋಜಿಸಲಾಗಿತ್ತು.

ಹಲಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಶ್ರೀನಿವಾಸ್‌ಆಚಾರಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ವಸ್ತುಪ್ರದರ್ಶನ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಶಿಕ್ಷಕಿ ಬಿ.ಲತಾ ಗೌಡ ಮಾತನಾಡಿ, ಪೂರ್ವಿಕರು ಹಿಂದಿನ ಕಾಲದಲ್ಲಿ ಸೌದೆಗಳನ್ನು ಉಪಯೋಗಿಸಿ ಮಡಕೆಗಳಲ್ಲಿ ಅಡುಗೆ ತಯಾರಿಸುತ್ತಿದ್ದರು. ಹಿತ್ತಾಳೆ ತಟ್ಟೆಗಳಲ್ಲಿ ಊಟ ಮಾಡುತ್ತಿದ್ದರು. ಹೆಚ್ಚು ಹಿತ್ತಾಳೆ ಪದಾರ್ಥಗಳನ್ನು ಉಪಯೋಗಿಸುತ್ತಿದ್ದರಿಂದ ಅವರು ಆರೋಗ್ಯವಂತರಾಗಿ ದೀರ್ಘಕಾಲ ಬಾಳುತ್ತಿದ್ದರು. ಆದರೆ ನಾವು ಅಡುಗೆ ಮಾಡಲು ಗ್ಯಾಸ್ ಬಳಸುತ್ತಿರುವುದರಿಂದ ಆರೋಗ್ಯದಲ್ಲಿ ಏರುಪೇರು ಆಗುತ್ತಿದೆ ಎಂದು ತಿಳಿಸಿದರು. ಮುಖ್ಯ ಶಿಕ್ಷಕ ಗಿರಿಗೌಡ ಮಾತನಾಡಿದರು. ಶಿಕ್ಷಕ ಎಂ.ಎನ್.ಪುನೀತ್ ಇದ್ದರು.

ವಿದ್ಯಾರ್ಥಿಗಳು ವಿವಿಧ ರೀತಿಯ ವೇಷಭೂಷಣ ಧರಿಸಿದ್ದರು. ಎಲ್ಲ ತರಹದ ವಸ್ತುಪ್ರದರ್ಶನಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಹಳ್ಳಿ ಮನೆ ಮಾದರಿ ನಿರ್ಮಿಸಿ, ಅದರಲ್ಲಿ ಮಡಕೆ, ಹಿತ್ತಾಳೆ ಪದಾರ್ಥಗಳು ಇಡಲಾಗಿತ್ತು. ರಾಗಿ ಒಕ್ಕಣೆ ಮಾಡುವ ವಿಧಾನದ ರೀತಿಯಲ್ಲಿ ರಾಗಿಯನ್ನು ಗುಡ್ಡೆ ಮಾಡಿ, ಸಂಕ್ರಾಂತಿ ಹಬ್ಬದ ಸೊಗಡನ್ನು ತಿಳಿಸುವ ರೀತಿ ಪ್ರೇಕ್ಷಕರ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net