ಆರೋಗ್ಯಕರ ಜೀವನಕ್ಕೆ ಪರಿಸರ ಉಳಿಸಿ

06ALD01
ಮೈನಳ್ಳಿಯಲ್ಲಿ ಯುವ ಜಾಗೃತಿ ಸಂಸ್ಥೆಯಿಂದ ವಿಶ್ವ ಪರಿಸರ ದಿನ ನಿಮಿತ್ತ ಸಸಿ ನೆಡಲಾಯಿತು. ಪತ್ರಕರ್ತ ಉದಯ ತೋಟದ, ಎಸ್‌ಡಿಎಂಸಿ ಅಧ್ಯಕ್ಷ ಗವಿಸಿದ್ದಪ್ಪ ಬಳಿಗೇರಿ, ಪ್ರಮುಖರಾದ ಪ್ರದೀಪ ಗೋಡಿ, ನೀಲಪ್ಪ ಇತರರಿದ್ದರು.
Published on

ಅಳವಂಡಿ: ಮನುಷ್ಯ ಐಷಾರಾಮಿ ಬದುಕಿಗಾಗಿ ಪರಿಸರ ನಾಶಮಾಡುತ್ತಿದ್ದು, ಹೀಗೆಯೇ ಮುಂದುವರಿದರೆ ಭವಿಷ್ಯದಲ್ಲಿ ಆಮ್ಲಜನಕ ಖರೀದಿಸಬೇಕಾಗುತ್ತದೆ ಎಂದು ಮುಖ್ಯಶಿಕ್ಷಕ ಬಸಯ್ಯ ಹಿರೇಮಠ ಹೇಳಿದರು.

ಸಮೀಪದ ಮೈನಳ್ಳಿಯ ಶಿವಶರಣೆ ಬುಡ್ಡಮ್ಮದೇವಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಯುವ ಜಾಗೃತಿ ಸಂಸ್ಥೆ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಆರೋಗ್ಯಕರ ಜೀವನಕ್ಕೆ ಪರಿಸರ ಅಗತ್ಯ. ಮೋಜು ಮಸ್ತಿಗೆ ದುಂದು ವೆಚ್ಚ ಮಾಡದೇ ಸಸಿ ನೆಟ್ಟು ಆರೈಕೆ ಮಾಡಿ. ಇದು ಜೀವ ಸಂಕುಲಕ್ಕೆ ಉಸಿರಾಗಲಿದೆ ಎಂದರು.

ಶಿಕ್ಷಕ ಕೃಷ್ಣ ಮಾತನಾಡಿ, ಖನಿಜ ಸಂಪತ್ತು, ಬೃಹತ್ ಕೈಗಾರಿಕೆ, ರಸ್ತೆ, ದೊಡ್ಡ ದೊಡ್ಡ ಬಂಗಲೆ ನಿರ್ಮಾಣ, ವಾಣಿಜ್ಯೋದ್ಯಮ ನೆಪದಲ್ಲಿ ನಿತ್ಯ ಸಾವಿರಾರು ಮರಗಳ ಮಾರಣ ಹೋಮ ನಡೆಯುತ್ತಿದ್ದು, ಪ್ಲಾಸ್ಟಿಕ್ ಬಳಕೆ ಜಲ ಮಾಲಿನ್ಯ ಉಂಟುಮಾಡುತ್ತದೆ.

ಹೀಗೆ ಮುಂದುವರಿದರೆ ಜೀವ ಸಂಕುಲ ನಾಶ ಖಚಿತ ಎಂದರು. ಪತ್ರಕರ್ತ ಉದಯ ತೋಟದ, ಎಸ್‌ಡಿಎಂಸಿ ಅಧ್ಯಕ್ಷ ಗವಿಸಿದ್ದಪ್ಪ ಬಳಿಗೇರಿ, ಪ್ರಮುಖರಾದ ಪ್ರದೀಪ ಗೋಡಿ, ನೀಲಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net