

ಚಳ್ಳಕೆರೆ: ಸಣ್ಣ ಆರೋಗ್ಯ ಸಮಸ್ಯೆಯೂ ನಿರ್ಲಕ್ಷ್ಯ ಮಾಡದೆ ಪ್ರತಿಯೊಬ್ಬರಲ್ಲೂ ಆರೋಗ್ಯ ಕಾಪಾಡಿಕೊಳ್ಳುವ ಜಾಗೃತಿ ಇರಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆಯುಷ್ಮಾನ್ ಭವ ಅಭಿಯಾನ ಕಾರ್ಯಕ್ರಮದಲ್ಲಿ ಆರೋಗ್ಯ ಕಾರ್ಡ್ ವಿತರಣೆ ಮಾಡಿ ಮಾತನಾಡಿದರು.
ಆಯುಷ್ಮಾನ್ ಆರೋಗ್ಯ ಯೋಜನೆ ಕೇಂದ್ರ ಸರ್ಕಾರದ ಮಹತ್ವ ಕಾರ್ಯಕ್ರಮವಾಗಿದೆ. ಪ್ರತಿಯೊಬ್ಬರಲ್ಲೂ ಆರೋಗ್ಯ ಕಾಪಾಡಿಕೊಳ್ಳುವ ಕಾಳಜಿ ಇರಬೇಕು. ಸಣ್ಣ ಆರೋಗ್ಯ ಸಮಸ್ಯೆ ನಿರ್ಲಕ್ಷಿೃಸಿದರೆ ದೊಡ್ಡ ಆರ್ಥಿಕ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸರ್ಕಾರದ ಯೋಜನೆಯಲ್ಲಿ ಆಯುಷ್ಮಾನ್ ಕಾರ್ಡ್ ಪಡೆದು ಆರೋಗ್ಯ ರಕ್ಷಣೆಗೆ ಅನುಕೂಲ ಮಾಡಿಕೊಳ್ಳಬೇಕು. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಪರಿಣಾಮಕಾರಿಯಾಗಿ ಆರೋಗ್ಯ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ನಿವೃತ್ತ ಪ್ರಾಚಾರ್ಯ ಬಿ.ವಿ.ಸಿರಿಯಪ್ಪ, ಪ್ರಾಚಾರ್ಯ ಡಾ.ಆರ್. ರಂಗಪ್ಪ, ನಗರಸಭಾ ಸದಸ್ಯ ಎಂ.ಜೆ. ರಾಘವೇಂದ್ರ, ತಾಲೂಕು ಆರೋಗ್ಯ ಅಧಿಕಾರಿ ಡಾ.ಎನ್. ಕಾಶಿ, ವೈದ್ಯಾಧಿಕಾರಿ ಡಾ.ಜೆ.ಡಿ. ವೆಂಕಟೇಶ್, ಮಕ್ಕಳ ತಜ್ಞೆ ಡಾ. ಪಂಕಜಾ, ಡಾ. ಜಯಲಕ್ಷ್ಮೀ, ಡಾ. ಸಾಯಿನಾಗ ಜ್ಯೋತಿ, ಎಸ್.ಬಿ. ತಿಪ್ಪೇಸ್ವಾಮಿ, ರಶ್ಮಿ, ಎಚ್. ಮಂಜುಳಾ, ಸುಮಾ, ತಿಪ್ಪೀರಮ್ಮ ಮತ್ತಿತರರು ಇದ್ದರು.