ಎಲ್ಲ ಸಂಪತ್ತಿಗಿಂತ ಆರೋಗ್ಯ ಮುಖ್ಯ

12ckd1
ಚಿಕ್ಕೋಡಿ ತಾಲೂಕಿನ ಕೆರೂರ ಗ್ರಾಮದ ಬಸವೇಶ್ವರ ಮಂದಿರದಲ್ಲಿ ಕೆಎಲ್‌ಇ ಬಸವಪ್ರಭು ಕೋರೆ ಮಹಾವಿದ್ಯಾಲಯದಲ್ಲಿ ರಾಷ್ಟೀಯ ಸೇವಾ ಯೋಜನೆಯ ಭಾಗವಾಗಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರಕ್ಕೆ ಪ್ರಾಚಾರ್ಯ ಡಾ.ಕಿರಣಕುಮಾರ ಮುತ್ನಾಳಿ ಚಾಲನೆ ನೀಡಿದರು. ಎನ್.ಬಿ.ಪಾಟೀಲ ಇತರರಿದ್ದರು.
Published on

ಚಿಕ್ಕೋಡಿ: ಮನುಷ್ಯನಿಗೆ ಎಲ್ಲ ಸಂಪತ್ತುಗಳಲ್ಲಿ ಆರೋಗ್ಯ ಸಂಪತ್ತು ಮುಖ್ಯ, ಪ್ರತಿಯೊಬ್ಬರೂ ಆರೋಗ್ಯದ ಕಾಳಜಿ ವಹಿಸಬೇಕೆಂದು ಚಿಕ್ಕೋಡಿಯ ಕೆಎಲ್‌ಇ ಆಯುರ್ವೇದ ವೆದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ಪ್ರಾಚಾರ್ಯ ಡಾ. ಕಿರಣಕುಮಾರ ಮುತ್ನಾಳಿ ಹೇಳಿದರು. ಸಮೀಪದ ಕೆರೂರ ಗ್ರಾಮದ ಬಸವೇಶ್ವರ ಮಂದಿರದಲ್ಲಿ ಕೆಎಲ್‌ಇ ಬಸವಪ್ರಭು ಕೋರೆ ಮಹಾವಿದ್ಯಾಲಯ ರಾಷ್ಟೀಯ ಸೇವಾ ಯೋಜನೆಯ ಭಾಗವಾಗಿ ಶನಿವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದರು. ಇಂದು ಮಧುಮೇಹ, ಬೊಜ್ಜು, ಕಾನ್ಸರ್ ಹೆಚ್ಚಾಗಿ ಕಂಡು ಬರುತ್ತಿದ್ದು, 6 ತಿಂಗಳಿಗೊಮ್ಮೆ ತಪಾಸಣೆ ಮಾಡಿಸಿದರೆ ರೋಗ ತಡೆಗಟ್ಟಬಹುದು ಎಂದರು.

ಕೆಎಲ್‌ಇ ಬಸವಪ್ರಭು ಕೋರೆ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಅಕಾರಿ ಎನ್.ಬಿ.ಪಾಟೀಲ ಮಾತನಾಡಿ, ಜೀವನ ಶೆಲಿ, ಆಹಾರ ಪದ್ದತಿ ಮತ್ತು ವಿಚಾರ ಉತ್ತಮವಾಗಿದ್ದರೆ ಆರೋಗ್ಯವಾಗಿರಬಹುದು. ಆಯುರ್ವೇದ ಚಿಕಿತ್ಸೆ ದೀರ್ಘವಾಗಿದ್ದರೂ ಉತ್ತಮ ಲಿತಾಂಶ ನೀಡುತ್ತದೆ ಎಂದು ಹೇಳಿದರು. ಮಲ್ಲಿಕಾರ್ಜುನ ಸ್ವಾಗತಿಸಿದರು. ಅರ್ಪಿತಾ ಹೊಳೆಪ್ಪಗೋಳ ನಿರೂಪಿಸಿದರು. ಸುಶ್ಮೀತಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net