ಆಸ್ತಿ, ಅಂತಸ್ತಿಗಿಂತ ಆರೋಗ್ಯ ಮುಖ್ಯ

h8-dhanwanatari
Published on

ಹುಬ್ಬಳ್ಳಿ: ಶ್ರೀ ಜಗದ್ಗುರು ರಂಭಾಪುರೀಶ ಸಾಂಸ್ಕೃತಿಕ ಸೇವಾ ಸಂಘ ಹಾಗೂ ಧನ್ವಂತರಿ ಸೇವಾ ಸಂಸ್ಥೆ ಆಶ್ರಯದಲ್ಲಿ ಅಸ್ತಮಾ, ದಮ್ಮು-ಕೆಮ್ಮು ಮುಂತಾದ ಕಾಯಿಲೆಗಳಿಗೆ ಉಚಿತವಾಗಿ ಔಷಧ ವಿತರಣೆ ಕಾರ್ಯಕ್ರಮ ಇತ್ತೀಚೆಗೆ ನಗರದಲ್ಲಿ ಏರ್ಪಾಟಾಗಿತ್ತು.

ಅಮ್ಮಿನಭಾವಿ ಪಂಚಗ್ರಹ ಹಿರೇಮಠದ ಶ್ರೀ ಶಾಂತಲಿಂಗ ಶಿವಾಚಾರ್ಯರು ಮಾತನಾಡಿ, ಮನುಷ್ಯನಿಗೆ ಆಸ್ತಿ-ಅಂತಸ್ತುಗಳಿಗಿಂತ ಆರೋಗ್ಯ ಅತಿ ಮುಖ್ಯ. ಹಾಗಾಗಿ ಆರೋಗ್ಯವೇ ಭಾಗ್ಯ ಎನ್ನುವಂಥ ಮಾತು ರೂಢಿಯಲ್ಲಿದೆ. ಇಂದಿನ ಕಲುಷಿತ ವಾತಾವರಣದಲ್ಲಿ ಆರೋಗ್ಯ ಕಾಪಾಡಿಕೊಳ್ಳುವಂಥದ್ದು ಅತ್ಯಗತ್ಯ. ಉಸಿರಾಡುವ ಗಾಳಿ ಸೇವಿಸುವ ಆಹಾರ ಕುಡಿಯುವ ನೀರು ಇವೆಲ್ಲವೂ ಕೂಡ ಕಲುಷಿತಗೊಂಡಿರುವ ಕಾರಣ ಮನುಷ್ಯ ಆರೋಗ್ಯ ಕಾಪಾಡಿಕೊಳ್ಳುತ್ತ ಗಮನಹರಿಸಬೇಕು ಎಂದರು.

ಶ್ರೀ ರಂಭಾಪುರೀಷ ಸಾಂಸ್ಕೃತಿಕ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಹಿರೇಗೌಡರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಡಾ. ಸುರೇಶ ಮೆಣಸಗಿ ಔಷಧ ವಿತರಿಸಿದರು.

ಚನ್ನಬಸಪ್ಪ ಧಾರವಾಡಶೆಟ್ರು, ಡಾ.ಎಸ್.ವಿ. ಹಿರೇಮಠ, ಗದಗಯ್ಯ ಹಿರೇಮಠ, ಆರ್.ಎಂ. ಹಿರೇಮಠ, ವಿ.ಜಿ. ಪಾಟೀಲ, ಬಸವರಾಜ ಸುಳ್ಳದ, ಶಿವಾನಂದ ಮಸಿಹಂಚಿನಾಳ, ಶಿವಾನಂದ ಬೆಂಗೇರಿ, ಪೂಜಾ ಹಿರೇಗೌಡರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net