

ಕನಕಗಿರಿ: ಮನುಷ್ಯ ಆರೋಗ್ಯವಾಗಿದ್ದರೆ ಏನನ್ನಾದರೂ ಸಾಧಿಸಬಹುದು ಎಂದು ರಾಷ್ಟ್ರೀಯ ಬಾಲ್ಯ ಸ್ವಾಸ್ಥ್ಯ ತಾಲೂಕು ವೈದ್ಯಾಧಿಕಾರಿ ರೇಖಾ ಹೇಳಿದರು.
ಇದನ್ನೂ ಓದಿ:ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ
ಪಟ್ಟಣದ ಪರಿಶಿಷ್ಟ ಜಾತಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಬಾಲ್ಯ ಸ್ವಾಸ್ಥ್ಯ ಕಾರ್ಯಕ್ರಮ ಹಾಗೂ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು. ಹಸನ್ಮುಖಿ ಜೀವನಕ್ಕೆ ಆರೋಗ್ಯ ಮುಖ್ಯ. ಆರೋಗ್ಯ ಸಮಸ್ಯೆ ಕಂಡುಬಂದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಸೇವೆ ಪಡೆಯಲು ವಿವಿಧ ಯೋಜನೆಗಳನ್ನು ಜಾರಿಗೊಳಿಸಿದ್ದು, ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಪ್ರಾಚಾರ್ಯ ರಾಜು ಮಡ್ಡಿ, ಆಪ್ತ ಸಮಾಲೋಚಕ ಅಮೀನ್ ಸಾಬ್ ನವಲಿ, ಶುಶ್ರೂಷಕಿ ಕೆ.ಗೀತಾ, ಶಿಕ್ಷಕರಾದ ಎಂ.ವೀರೇಶ, ಬಾಬು ನಡುವಿನಮನಿ, ಸುರೇಶ, ಅಂಜಿನಪ್ಪ, ಸುನೀಲ್ ಕುಮಾರ, ರೇವಣ ಸಿದ್ದಪ್ಪ, ವೀರಣ್ಣ, ಶ್ರೀಕಾಂತ, ಅಸ್ರಾಬಾನು, ನಿಲಯ ಪಾಲಕ ನಾಗರಾಜ, ಪ್ರಮುಖರಾದ ಅರುಣಾ, ಜ್ಯೋತಿ, ಉಮೇಶ ಅಳವಂಡಿ ಇತರರಿದ್ದರು.