ಜೀವನ ಕ್ರಮದಲ್ಲಿ ಅಡಗಿದೆ ಆರೋಗ್ಯ

08Koppa01
ಹರಿಹರಪುರ ರೋಟರಿ ಸಮುದಾಯದಳ ಅ.ರಾ.ಸ ಪದವಿಪೂರ್ವ ಕಾಲೇಜಿನ ಸಹಯೋಗದೊಂದಿಗೆ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳ ಮಾಹಿತಿ ಕಾರ್ಯಕ್ರಮವನ್ನು ಪ್ರಾಚಾರ್ಯ ಮಹಾದೇವ್ ಉದ್ಘಾಟಿಸಿದರು. ಮಂಜುನಾಥ್, ಡಾ. ಅಶ್ವಿನ್ ಶಾಸ್ತ್ರಿ, ಗೀತಾ ಇದ್ದರು.
Published on

ಕೊಪ್ಪ: ನಿಗದಿತ ಸಮಯಕ್ಕೆ ನಿಯಮಿತ ಆಹಾರ, ನಿದ್ರೆ ಮತ್ತು ವ್ಯಾಯಾಮ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಪೂರಕವಾದ ಸಂಗತಿಗಳು ಎಂದು ಹರಿಹರಪುರದ ಆಯುರ್ವೇದ ವೈದ್ಯ ಡಾ.ಅಶ್ವಿನ್ ಶಾಸ್ತ್ರಿ ಹೇಳಿದರು.
ಹರಿಹರಪುರ ರೋಟರಿ ಸಮುದಾಯದಳ ಅ.ರಾ.ಸ ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಆರೋಗ್ಯ ನಮ್ಮ ಜೀವನ ಕ್ರಮದಲ್ಲೇ ಅಡಗಿದೆ. ಪ್ರತಿಯೊಂದು ಸಣ್ಣ ಸಣ್ಣ ವಿಚಾರಗಳಲ್ಲೂ ಆಸಕ್ತಿ ವಹಿಸಿ ಕೆಲಸ ಮಾಡಿದಾಗ ಅದು ನಮ್ಮ ಜೀವನದ ದಿಕ್ಕನ್ನು ಬದಲಿಸಬಹುದು ಎಂದರು.
ಕಾಯ್ದೆ ಕಾನೂನುಗಳ ಕುರಿತು ಹರಿಹರಪುರದ ಪಿಎಸ್‌ಐ ಲೋಕೇಶ್ ಮಾಹಿತಿ ನೀಡಿ, ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಕಾನೂನು ಪಾಲನೆ ಶಿಸ್ತು ರೂಢಿಸಿಕೊಳ್ಳಬೇಕು. ಭವಿಷ್ಯದ ಗುರಿಯ ಬಗ್ಗೆ ಗಮನವಿರ ಬೇಕು. ಓದುವ ಹವ್ಯಾಸದೊಂದಿಗೆ ಸಮಾಜದ ಆಗು ಹೋಗುಗಳ ಕುರಿತು ಅರಿವು ಹೊಂದಬೇಕು ಎಂದು ತಿಳಿಸಿದರು.
ಕೊಪ್ಪ ಸರ್ಕಾರಿ ಆಸ್ಪತ್ರೆ ಬಿಎಚ್‌ಇ ಸುಧಾಕರ್ ಮಾತನಾಡಿ, ದೈಹಿಕ ಮಾನಸಿಕ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಆರೋಗ್ಯ ಮನುಷ್ಯನ ಪರಿಪೂರ್ಣ ವ್ಯಕ್ತಿತ್ವಕ್ಕೆ ಹಾಗೂ ಸ್ವಾಸ್ಥ್ಯ ಸಮಾಜಕ್ಕೆ ಪೂರಕವಾಗಿವೆ ಎಂದು ತಿಳಿಸಿದರು.
ಹರಿಹರಪುರ ಗ್ರಾಮ ಪಂಚಾಯತಿ ಪಿಡಿಒ ಕೆ.ಸಿಗೀತಾ ಸರ್ಕಾರದಿಂದ ಗ್ರಾಪಂ ಮೂಲಕ ಬರುವ ವಿವಿಧ ಯೋಜನೆಗಳು ಹಾಗೂ ಅವುಗಳನ್ನು ಬಳಸಿಕೊಳ್ಳುವ ಕುರಿತು ಮಾಹಿತಿ ನೀಡಿದರು.
ಹರಿಹರಪುರ ಅ.ರಾ.ಸ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಈಗ ಹರಿಯಾಣದ ಮಾನವ ರಚನಾ ವಿಶ್ವವಿದ್ಯಾನಿಲಯದಲ್ಲಿ ಅಸಿಸ್ಟೆಂಟ್ ಪ್ರೊೆಸರ್ ಆಗಿರುವ ಸ್ಥಳೀಯ ಪ್ರತಿಭಾವಂತ ಸಾಧಕ ಡಾ.ಸುಂದರೇಶ್ ಅವರನ್ನು ಸನ್ಮಾನಿಸಲಾಯಿತು.
ಹರಿಹರಪುರ ರೋಟರಿ ಸಮುದಾಯದಳದ ಅಧ್ಯಕ್ಷ ಬಿ.ಎಂ ಸಂಚನ್, ಪ್ರಾಚಾರ್ಯ ಮಹಾದೇವ್, ನಾಗರತ್ನ ನಟರಾಜ್ ಎ.ಓ ವೆಂಕಟೇಶ್, ಮುಕ್ತಾಂಬ, ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net