ಎಲ್ಲ ಸಂಪತ್ತಿಗಿಂತ ಆರೋಗ್ಯ ದೊಡ್ಡದು

Health is greater than all wealth
ತಾಳಿಕೋಟೆ ಪಟ್ಟಣದ ಖಾಸ್ಗತೇಶ್ವರ ಮಠದಲ್ಲಿ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ಬಿಎಲ್​ಡಿ ಸಂಸ್ಥೆಯ ವೈದ್ಯಕಿಯ ತಂಡದಿಂದ ಮಠದ ಉಸ್ತುವಾರಿ ವೇ.ಮುರುಶ ವಿರಕ್ತಮಠ ಅವರನ್ನು ಸನ್ಮಾನಿಸಲಾಯಿತು. ಡಾ.ವಿರುಪಾ ಬಿರಾದಾರ, ಡಾ.ಜಯಕೃಷ್ಣ ಮಿಶ್ರಾ, ಜಿ.ಟಿ.ೂರ್ಪಡೆ ಇತರರಿದ್ದರು.
Published on

ತಾಳಿಕೋಟೆ: ಆಸ್ತಿ, ಅಂತಸ್ತು ನಮ್ಮ ಜೊತೆ ಬರುವುದಿಲ್ಲ. ದಿನನಿತ್ಯ ಜೊತೆಯಾಗಿರುವುದೇ ಆರೋಗ್ಯ ಸಂಪತ್ತೆನ್ನುವುದನ್ನು ಋಷಿಮುನಿಗಳು, ಆರೋಗ್ಯ ತರು ಹೇಳುತ್ತ ಸಾಗಿ ಬಂದಿರುವುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಖಾಸ್ಗತೇಶ್ವರ ಮಠದ ಉಸ್ತುವಾರಿ ಮುರುಶ ವಿರಕ್ತಮಠ ಹೇಳಿದರು.

ಬಿ.ಎಂ. ಪಾಟೀಲ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆ ವಿಜಯಪುರ ಹಾಗೂ ಪಟ್ಟಣದ ಖಾಸ್ಗತೇಶ್ವರ ಮಠ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.

ಹಿಂದಿನ ಕಾಲದಲ್ಲಿ ಮಕ್ಕಳಿಗೆ ಹಿರಿಯರು ಆರೋಗ್ಯ ಭಾವನೆ ಮೂಡಿಸುತ್ತಿದ್ದರು. ಆದರೆ ಸದ್ಯ ಆ ಕಾರ್ಯವಾಗುತ್ತಿಲ್ಲ. ಒಳ್ಳೆಯ ಆಹಾರ ಸೇವನೆ, ದಿನನಿತ್ಯ ವ್ಯಾಯಾಮ, ಯೋಗ ಸಾಧನೆ ಮಾಡಿದರೆ ಆರೋಗ್ಯದಲ್ಲಿ ಯಾವುದೇ ಏರುಪೇರು ಆಗುವುದಿಲ್ಲ ಎಂದರು.

ಬಿಎಲ್​ಡಿ ಆಸ್ಪತ್ರೆಯ ನರರೋಗ ತ ಡಾ.ವಿರುಪಾ ಬಿರಾದಾರ ಮಾತನಾಡಿ, ಮದ್ಯಪಾನ ಹಾಗೂ ಮಾನಸಿಕ ಒತ್ತಡ ಇರುವವರಿಗೆ ನರರೋಗ ಖಾಯಿಲೆ ಬರುವ ಸಾಧ್ಯತೆ ಇದೆ. 40 ವರ್ಷ ಮೇಲ್ಪಟ್ಟವರು ನಿಯಮಿತವಾಗಿ ಶುಗರ್​ ತಪಾಸಣೆ ಮಾಡಿಸಿಕೊಳ್ಳುವುದು ಒಳಿತು ಎಂದರು.

ಹೃದಯ ಶಸ್ತ್ರ ವಿಭಾಗದ ತ ವೈದ್ಯ ಡಾ.ಜಯಕೃಷ್ಣ ಮಿಶ್ರಾ ಮಾತನಾಡಿ, ತುಪ್ಪ, ಪಾಮ್​ ಆಯಿಲ್​, ಮಟನ್​ ಚರಬಿಗಳಂಥ ಮಾಂಸ ಸೇವಿಸುವುದರಿಂದ ಹೃದಯ ಖಾಯಿಲೆ ಬರುವ ಸಾಧ್ಯತೆಯಿದೆ. ಎದೆನೋವು ಬಂದಾಗ ಚಕ್ರ ಬರುವ ಸಾಧ್ಯತೆಯಿದ್ದು ಕೂಡಲೇ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆ ಪಡೆಯಬೇಕು ಎಂದರು.

ಪತ್ರಕರ್ತ ಜಿ.ಟಿ.ೂರ್ಪಡೆ ಮಾತನಾಡಿ, ಬಿ.ಎಂ. ಪಾಟೀಲ ಸೂಪರ್​ ಆಸ್ಪತ್ರೆ ಜಿಲ್ಲೆಯ ತಾಲೂಕುಗಳಲ್ಲಿ ಇಂಥ ಆರೋಗ್ಯ ಉಚಿತ ತಪಾಸಣೆ ಕಾರ್ಯ ಮಾಡಿರುವುದು ಬಡಬಗ್ಗರಿಗೆ ಬಹಳ ಅನುಕೂಲವಾಗಿದೆ. ಸದ್ಯ ತಾಳಿಕೋಟೆಯ ಖಾಸ್ಗತೇಶ್ವರ ಮಠದಲ್ಲಿ ಶಿಬಿರ ಏರ್ಪಡಿಸಿರುವುದು ಸಂತಸ ತಂದಿದೆ ಎಂದರು.

ಆಡಳಿತಾಧಿಕಾರಿ ಶಾಂತೇಶ ಸಲಗಾರೆ ಮಾತನಾಡಿ, ಈ ಶಿಬಿರದಲ್ಲಿ ಪಾಲ್ಗೊಂಡವರು ವಿಜಯಪುರ ಆಸ್ಪತ್ರೆಗೆ ಆಗಮಿಸುವಾಗ ರೇಷನ್​ ಕಾರ್ಡ್​, ಆಧಾರ್​ ಕಾರ್ಡ್​ಗಳನ್ನು ಹಾಗೂ ಇಲ್ಲಿ ನೀಡಲಾದ ಓಪಿಡಿ ಕಾರ್ಡ್​ನ್ನು ತಪ್ಪದೇ ತರಬೇಕು ಎಂದು ಹೇಳಿದರು.

ಶಿಬಿರದಲ್ಲಿ 103 ಜನರ ಆರೋಗ್ಯ ತಪಾಸಣೆ ಮಾಡಲಾಯಿತು. ಮೂತ್ರ ಜನಕಾಂಗ ಶಸ್ತ್ರಚಿಕಿತೆಗೆ ಸಂಬಂಧಿಸಿದ 15 ರೋಗಿಗಳು, ಹೃದಯರೋಗ ಶಸ್ತ್ರ ಚಿಕಿತ್ಸೆಗೆ ಸಂಬಂಧಿತ 48, ನರರೋಗ ಶಸ್ತ್ರಚಿತ್ಸೆಗೆ ಸಂಬಂಧಿಸಿದ 40 ಹಾಗೂ ಸಕ್ಕರೆ ಖಾಯಿಲೆ ಸಂಬಂಧಿತ 72 ಜನರನ್ನು ಬಿಎಲ್​ಡಿಇ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಆಯ್ಕೆ ಮಾಡಲಾಯಿತು. 40 ಜನರಿಗೆ ಇಸಿಜಿ ಮಾಡುವ ಜೊತೆಗೆ ಎಲ್ಲ ರೋಗಿಗಳ ರಕ್ತದೊತ್ತಡ, ನಾಡಿಮಿಡಿತ, ದೇಹತೂಕ ಸಂಬಂಧಿಸಿ ವೈದ್ಯರು ಸಮಾಲೋಚನೆ ನಡೆಸಿ ತಿಳಿವಳಿಕೆ ನೀಡಿದರು.

ಮೂತ್ರಶಾಸ್ತ್ರ ವಿಭಾಗದ ಡಾ.ಧ್ರುವ ಎಚ್​.ಎಂ, ಡಾ.ವೀರಪ್ಪ ಕೊಟಗಿ, ಹೃದಯ ಶಸ್ತ್ರ ವಿಭಾಗದ ಡಾ.ಸುನೀಲ್​ ಹಾಗೂ ನರ್ಸಿಂಗ್​ ವಿಭಾಗದ ಕಲ್ಲಪ್ಪ ಸಾರವಾಡ, ದ್ರಾಾಯಣಿ ಶೆಟಗಾರ, ದಿವ್ಯಶ್ರೀ ಜಾಲವಾದಿ, ರಾಜನ್​ ಚವ್ಹಾಣ, ಪ್ರಜ್ವಲ್​ ಹುಡೇದ, ಪ್ರಿಯಾ ಮಾಳಿ, ಸ್ನೇಹಾ ಡಿ., ಸ್ಪಂದನಾ ಎಚ್​., ಸಿಬ್ಬಂದಿ ಅಣ್ಣಾಸಾಬ ಇಂಡಿ, ಅನೀಲ ಪೂಜಾರಿ, ಅನೀಷಾ, ಕಸ್ತೂರಿ, ಔಷಧ ವ್ಯಾಪಾರಿ ರಮೇಶ ಸಾಲಂಕಿ ಇತರರಿದ್ದರು. ಪ್ರೀತು ದಶವಂತ ಸ್ವಾಗತಿಸಿದರು. ಸಹಾಯಕ ಸಂಪರ್ಕಾಧಿಕಾರಿ ಚನ್ನಬಸವ ಕೊಟಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net