ಆರೋಗ್ಯ ವಿಮಾ ಯೋಜನಾ ಶಿಬಿರ

New Project (1)
Published on

ಸುಳ್ಯ: ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್ ಕ್ಲಬ್ ಸುಳ್ಯ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಆಶ್ರಯದಲ್ಲಿ ಡಿ.16ರಂದು ಸುಳ್ಯ ಲಯನ್ಸ್ ಸೇವಾ ಸದನದಲ್ಲಿ ಬೃಹತ್ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಅಭಿಯಾನ ಮತ್ತು ಅಂಚೆ, ಅಪಘಾತ, ಆರೋಗ್ಯ ವಿಮಾ ಯೋಜನಾ ಶಿಬಿರ ನಡೆಯಿತು.

ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಎಂ.ಬಿ.ಸದಾಶಿವ ಉದ್ಘಾಟಿಸಿದರು. ಸುಳ್ಯದ ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ ರೈ ಅಧ್ಯಕ್ಷತೆ ವಹಿಸಿದ್ದರು. ಅಂಚೆ ನಿರೀಕ್ಷಕ ವಿನೋದ್ ಕಾಮತ್, ಸುಳ್ಯ ಉಪ ವಿಭಾಗದ ಅಂಚೆ ಪಾಲಜತ ಮೋಹನ ಎಂ.ಕೆ., ಕಾರ್ಯಕ್ರಮದ ಸಂಯೋಜಕ ವೀರಪ್ಪ ಗೌಡ ಕೆ.ಉಪಸ್ಥಿತರಿದ್ದರು. ಬಳಿಕ ನಡೆದ ನೋಂದಣಿ ಹಾಗೂ ತಿದ್ದುಪಡಿ ಅಭಿಯಾನದಲ್ಲಿ ನೂರಾರು ಮಂದಿ ಫಲಾನುಭವಿಗಳು ಭಾಗವಹಿಸಿ ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net