

ಬೆಳಗಾವಿ: ಗ್ರಾಮೀಣ ಭಾಗದ ಜನರ ತುರ್ತು ಆರೋಗ್ಯ ಸೇವೆ ಕಲ್ಪಿಸುವಲ್ಲಿ ಆಂಬುಲೆನ್ಸ್ಗಳ ಪಾತ್ರ ಅತ್ಯಂತ ಮುಖ್ಯವಾಗಿದ್ದು, ಸುವರ್ಣ ಳಿಗೆಯಲ್ಲಿ ರೋಗಿಯನ್ನು ಆಸ್ಪತ್ರೆಗೆ ಸೇರಿಸಿ ಜೀವ ಉಳಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂದು ಕೆಎಲ್ಇ ಸಂಸ್ಥೆ ಕಾರ್ಯಾಧ್ಯ ಡಾ. ಪ್ರಭಾಕರ ಕೋರೆ ಹೇಳಿದರು.
ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕಿಯ ಸಂಶೋಧನಾ ಕೇಂದ್ರಕ್ಕೆ ಕರ್ನಾಟಕ ಬ್ಯಾಂಕ್ ಸಾಮಾಜಿಕ ಬದ್ಧತಾ ಯೋಜನೆಯಡಿ ನೀಡಿದ ನೂತನ ಆಂಬುಲೆನ್ಸ್ಗಳನ್ನು ಬುಧವಾರ ಜನಸೇವೆಗೆ ಅರ್ಪಿಸಿ ಅವರು ಮಾತನಾಡಿ, ತುರ್ತು ಸಂದರ್ಭಗಳಲ್ಲಿ ಅನುಕೂಲವಾಗುವಂತೆ ಸಂ&ಸಂಸ್ಥೆಗಳು ಕೈಜೋಡಿಸುವಂತೆ ಕರೆ ನೀಡಿದರು.
ನಾವು ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಒಂದೇ ಸೂರಿನಡಿ ಸಕಲ ಆರೋಗ್ಯ ಸೇವೆ ಕಲ್ಪಿಸಲಾಗುತ್ತಿದೆ. ಕ್ಯಾನ್ಸರ್ ಆಸ್ಪತ್ರೆಯನ್ನೂ ಜನಸೇವೆಗೆ ಅರ್ಪಿಸಲಾಗಿದೆ ಎಂದರು.
ಈ ವೇಳೆ ಕಾಹೆರ್ನ ಉಪಕುಲಪತಿ ಡಾ. ನಿತಿನ ಗಂಗಾನೆ, ಡಾ.ವಿ.ಡಿ. ಪಾಟೀಲ, ರಜಿಸ್ಟ್ರಾರ್ ಎಸ್.ಎಸ್.ಗಣಾಚಾರಿ, ಜೆಎನ್ಎಂಸಿ ಪ್ರಾಚಾರ್ಯ ಡಾ.ಎನ್.ಎಸ್.ಮಹಾಂತಶೆಟ್ಟಿ, ಉಪಪ್ರಾಚಾರ್ಯ ಡಾ.ವಿಶ್ವನಾಥ ಪಟ್ಟಣಶೆಟ್ಟಿ, ಡಾ. ಆರಿಫ್ ಮಾಲ್ದಾರ, ಕೆಎಲ್ಇ ಸಂಸ್ಥೆಯ ಬ್ಯಾಂಕಿಂಗ್ ವ್ಯವಹಾರಗಳ ನಿರ್ದೇಶಕ ಬಸವರಾಜ ಜೇವರಗಿಕರ, ಕರ್ನಾಟಕ ಬ್ಯಾಂಕ್ನ ಪ್ರಾದೇಶಿಕ ಮುಖ್ಯಸ್ಥ ವಿಶ್ವನಾಥ ಎಸ್.ಆರ್., ಹಿರಿಯ ನಿರ್ವಾಹಕ ಪ್ರಸನ್ನ ಪಾವಸ್ಕರ ಇತರರಿದ್ದರು.