ಯೋಗಾಭ್ಯಾಸದಿಂದ ಆರೋಗ್ಯ ಸುಧಾರಣೆ

21 HRS 03
ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಹಿರೀಸಾವೆ ಹೋಬಳಿ ದಿಡಗ ಗ್ರಾಮದ ಹೊಯ್ಸಳ ವಿದ್ಯಾ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಯೋಗ ಕಾರ್ಯಕ್ರಮದಲ್ಲಿ ತಲ್ಲೀನರಾಗಿರುವ ವಿದ್ಯಾರ್ಥಿಗಳು.
Published on

ಹಿರೀಸಾವೆ: ಯೋಗಾಭ್ಯಾಸದಿಂದ ಆರೋಗ್ಯದ ಸುಧಾರಣೆ ಜತೆಗೆ ಶಾಂತಿ, ನೆಮ್ಮದಿ ಹಾಗೂ ಒತ್ತಡಮುಕ್ತ ಜೀವನ ಲಭಿಸುತ್ತದೆ ಎಂದು ಹೊಯ್ಸಳ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಮೆಡಿಕಲ್ ರಾಮೇಗೌಡ ಹೇಳಿದರು.

ಹೋಬಳಿಯ ದಿಡಗ ಗ್ರಾಮದ ಅರುಣೋದಯ ಫ್ರೌಢಶಾಲೆ, ಹೊಯ್ಸಳ ವಿದ್ಯಾಸಂಸ್ಥೆ ಹಾಗೂ ವಿಜಯವಾಣಿ ಸಹಯೋಗದಲ್ಲಿ ಶುಕ್ರವಾರ ಅಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಎಷ್ಟೇ ಹಣವಿದ್ದರೂ ಸುಖ, ಶಾಂತಿ, ನೆಮ್ಮದಿ ಹಾಗೂ ಆರೋಗ್ಯವನ್ನು ಖರೀದಿ ಮಾಡಲು ಸಾಧ್ಯಲಿಲ್ಲ. ಹಾಗೆಯೇ ಒತ್ತಡದ ಬದುಕು ಸಹ ಬದಲಾಗುವುದಿಲ್ಲ. ಆದರೆ ಯಾವುದೇ ಹಣ ವ್ಯಯವಿಲ್ಲದ ಯೋಗ ಅಭ್ಯಾಸದಲ್ಲಿ ತೊಡಗಿಸಿಕೊಂಡಲ್ಲಿ ಎಲ್ಲವೂ ತಾನಾಗಿಯೇ ಲಭಿಸುತ್ತವೆ ಎಂದರು.

ಯೋಗ ಹಾಗೂ ಧ್ಯಾನ ಕಾಯಕವನ್ನು ನಮ್ಮ ಬದುಕಿನ ನಿತ್ಯದ ದಿನಚರಿಯಾಗಿ ಮಾಡಿಕೊಂಡಲ್ಲಿ ವೈದ್ಯರಿಂದ ದೂರ ಉಳಿಯಬಹುದು. ಅಲ್ಲದೆ ಯೋಗ ರೂಢಿಸಿಕೊಂಡ ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ಇತರರನ್ನೂ ಯೋಗ ಅಥವಾ ಧ್ಯಾನದಲ್ಲಿ ತೊಡಗುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದೈಹಿಕ ಶಿಕ್ಷಣಶಿಕ್ಷಕ ಡಿ.ವಿ.ನಾಗೇಂದ್ರ ಅವರ ಮಾರ್ಗದರ್ಶನದಲ್ಲಿ ಭಾಗವಹಿಸಿದ್ದವರು ವಿವಿಧ ಆಸನಗಳನ್ನು ಪ್ರದರ್ಶಿಸಿದರು.

ಅರುಣೋದಯ ಫ್ರೌಢಶಾಲೆಯ ಮುಖ್ಯಶಿಕ್ಷಕ ತಿಮ್ಮೇಗೌಡ, ಹೊಯ್ಸಳ ವಿದ್ಯಾ ಸಂಸ್ಥೆಯ ಮುಖ್ಯಶಿಕ್ಷಕ ಬಿ.ಎಚ್.ನಂದೀಶ್, ಶಿಕ್ಷಕ ವೃಂದ ಹಾಗೂ ಇತರರು ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net