

ಮೂಲ್ಕಿ: ಗ್ರಾಮೀಣ ಪ್ರದೇಶದ ಜನರಿಗೆ ನಗರದ ಆರೋಗ್ಯ ಸೌಲಭ್ಯಗಳು ಉಚಿತವಾಗಿ ಲಭಿಸುವಂತೆ ಮಾಡುವ ಯುವ ಸೇವಾ ಸಂಸ್ಥೆಗಳ ಕಾರ್ಯ ಅಭಿನಂದನೀಯ ಎಂದು ಹಳೆಯಂಗಡಿ ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ ಹೇಳಿದರು.
ಹಳೆಯಂಗಡಿ ಗ್ರಾಮ ಪಂಚಾಯಿತಿ ಮತ್ತು ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ ಸಹಯೋಗದೊಂದಿಗೆ ಶುಕ್ರವಾರ ಉಚಿತ ಫೂಟ್ ಪಲ್ಸ್ ಥೆರಪಿ ಮೂಲಕ ಆರೋಗ್ಯ ಸುಧಾರಣಾ ಶಿಬಿರ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.
ವಿದ್ಯಾ ವಿನಾಯಕ ಯುವಕ ಮಂಡಲದ ಅಧ್ಯಕ್ಷ ನಾಗೇಶ್ ಟಿ.ಜಿ., ಗ್ರಾಪಂ ಸದಸ್ಯರಾದ ಅಬ್ದುಲ್ ಖಾದರ್, ಅಶೋಕ್ ಬಂಗೇರ, ಅಬ್ದುಲ್ ಅಜೀಜ್, ಧನರಾಜ್ ಕೋಟ್ಯಾನ್, ವಿನೋದ್ ಕುಮಾರ್, ಪಂಚಾಯಿತಿ ಲೆಕ್ಕ ಸಹಾಯಕ ಕೇಶವ ದೇವಾಡಿಗ, ಸಂಸ್ಥೆ ನರೇಂದ್ರ ಕುಂದಾಪುರ, ಉಮೇಶ್ ಬಂಗೇರ, ನಂದಿತಾ ಶೆಟ್ಟಿ, ಗ್ರಾಮಸ್ಥರು ಉಪಸ್ಥಿತರಿದ್ದರು.