

ಮೂಡಲಗಿ: ಮಕ್ಕಳ ದೈಹಿಕ, ಮಾನಸಿಕ ಹಾಗೂ ಬೌದ್ಧಿಕ ಬೆಳೆವಣಿಗೆಗೆ ಯೋಗ ಸಹಕಾರಿಯಾಗಿದೆ ಎಂದು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕ್ರೀಡಾ ವಿಭಾಗದ ಸಹಾಯಕ ನಿರ್ದೇಶಕ ಡಾ.ಜಗದೀಶ ಗಸ್ತಿ ಹೇಳಿದರು.
ತಾಲೂಕಿನ ಕಲ್ಲೋಳಿಯ ಶ್ರೀರಾಮಲಿಂಗೇಶ್ವರ ಶಿಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಅಂತರ್ ಕಾಲೇಜುಗಳ ಏಕವಲಯ ಪುರುಷ ಹಾಗೂ ಮಹಿಳೆಯರ ಯೋಗಾಸನ ಪಂದ್ಯಾವಳಿ ಹಾಗೂ ವಿವಿ ತಂಡದ ಆಯ್ಕೆ ಪ್ರಕ್ರಿಯೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರು ನಿತ್ಯ ಜೀವನದಲ್ಲಿ ಯೋಗ ರೂಢಿಸಿಕೊಳ್ಳುವ ಮೂಲಕ ರೋಗ ದೂರಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎಸ್ಆರ್ಇ ಸಂಸ್ಥೆ ಚೇರ್ಮನ್ ಬಸನಗೌಡ ಪಾಟೀಲ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಯೋಗ ಜಾಗತಿಕ ಮನ್ನಣೆ ಗಳಿಸಿದೆ. ಯುವ ಜನಾಂಗ ನಿತ್ಯ ಯೋಗಾಭ್ಯಾಸ ಹಾಗೂ ವ್ಯಾಯಾಮ ಮಾಡಬೇಕು ಎಂದು ತಿಳಿಸಿದರು.
ಬೆಂಗಳೂರಿನ ಅಂತಾರಾಷ್ಟ್ರೀಯ ಯೋಗಾಸನ ತಾಂತ್ರಿಕ ಮುಖ್ಯಾಧಿಕಾರಿ ಡಾ.ಪ್ರೇಮಕುಮಾರ ಮುದ್ದಿ, ದೈಹಿಕ ನಿರ್ದೇಶಕ ಬಿ.ಎಸ್.ಪಾಟೀಲ, ಶ್ರೀಶೈಲ ಗೋಪಶೆಟ್ಟಿ, ಜಿಮ್ ಕೋಚ್ ದೇವರಾಜ ಚೌಗಲೆ, ಪ್ರಾಚಾರ್ಯ ಡೇನಿಯಲ್ ಸ್ಯಾಮ್ಯುಯೆಲ್, ಎಸ್ಆರ್ಇ ಸಂಸ್ಥೆ ಉಪಾಧ್ಯ ಬಿ.ಆರ್.ಕಡಾಡಿ, ನಿರ್ದೇಶಕರಾದ ಬಿ.ಎಸ್.ಗೋರೋಶಿ, ಎಸ್.ಎಂ.ಖಾನಾಪೂರ, ಎಂ.ಎಸ್. ಕಪ್ಪಲಗುದ್ದಿ, ಎಂ.ಡಿ.ಕುರಬೇಟ, ಬಿ.ಕೆ.ಸೊಂಟನವರ ಇತರರಿದ್ದರು. ರಾಧಿಕಾ ಕರೆಪ್ಪಗೋಳ, ಡಿ.ಎಸ್.ಹುಗ್ಗಿ, ಡಾ.ಕೆ.ಎಸ್.ಪರವ್ವಗೋಳ ಹಾಗೂ ಬಿ.ಸಿ.ಮಾಳಿ ಕಾರ್ಯಕ್ರಮನಿರ್ವಹಿಸಿದರು.