ವಿಕಲಚೇತನರು ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ

08GDG03
Published on

ಗದಗ: ಎಲ್ಲಾ ವಿಕಲಚೇತನರು ಹಾಗೂ ಹಿರಿಯ ನಾಗರಿಕರು ಪ್ರತಿ ವರ್ಷ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು ಅವಶ್ಯವಾಗಿದೆ ಎಂದು ಸಿ.ಎಚ್​.ಓ. ಡಾ. ಚಂದ್ರು ಹೇಳಿದರು.
ಗುರುವಾರ ತಾಲೂಕಿನ ಕೋಟುಮಚಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾರಾಯಣಪುರ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್​ ಇಲಾಖೆ ವತಿಯಿಂದ ಉಚಿತ ಆರೋಗ್ಯ ತಪಾಸಣೆಯಲ್ಲಿ ಬಾಗವಹಿಸಿ ಮಾತನಾಡಿದರು.
ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರು ತಮ್ಮ ಯಾವುದೇ ಸಮಸ್ಯೆಗಳು ಇದ್ದಲ್ಲಿ ಸರ್ಕಾರದಿಂದ ಆಯೋಜನೆ ಮಾಡಿರುವ ಉಚಿತ ಆರೋಗ್ಯ ತಪಾಸಣೆ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಈ ಆರೋಗ್ಯ ತಪಾಸಣೆಯಲ್ಲಿ 38 ಜನರು ಭಾಗವಹಿಸಿದ್ದರು.
ಎಂ.ಆರ್​.ಡಬ್ಲೂ ಖಾಜಾಹುಸೇನ ಕಾತರಕಿ, ರಾಜೇಸಾಬ ನದಾ, ವಿದ್ಯಾ ಕಿತ್ತೂರ, ಶೀಲಾ ಮಳೇಕರ, ಬಿ. ಸಿ. ಹಿರೇಹಾಳ, ಎಸ್​. ಬಿ. ಗಡಾದ, ಎಲ್​. ಸಿ. ಜೋಶಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net