ಲವಣ ಮಿಶ್ರಿತ ಆಹಾರದಿಂದ ಆರೋಗ್ಯ

sabhe
ನಾಲ್ಕೂರು ಹಾಲು ಉತ್ಪಾದಕರ ಸಹಕಾರಿ ಸಂಘ ಸಾಮಾನ್ಯ ಸಭೆಯಲ್ಲಿ ದ.ಕ. ಹಾಲು ಒಕ್ಕೂಟ ಉಪವ್ಯವಸ್ಥಾಪಕ ಡಾ.ಧನಂಜಯ್ ಮಾತನಾಡಿದರು
Published on

ಕೊಕ್ಕರ್ಣೆ: ಹಸುಗಳಿಗೆ ಲವಣ ಮಿಶ್ರಿತ ಆಹಾರ ನೀಡುವುದರಿಂದ ರಕ್ತ ಹೀನತೆ ಕಡಿಮೆ ಆಗುತ್ತದೆ. ಕಾಯಿಲೆಗಳ ಸಂಖ್ಯೆ ಕಡಿಮೆಯಾಗುತ್ತದೆ. ಖನಿಜ ಮಿಶ್ರಣ ನೀಡುವುದರಿಂದ ಹಾಲಿನ ಗುಣಮಟ್ಟ ಉತ್ತಮವಾಗಿರುತ್ತದೆ ಎಂದು ದ.ಕ. ಹಾಲು ಒಕ್ಕೂಟ ಉಪವ್ಯವಸ್ಥಾಪಕ ಡಾ.ಧನಂಜಯ್ ಹೇಳಿದರು.
ಸಂಘದ ವಠಾರದಲ್ಲಿ ನಾಲ್ಕೂರು ಹಾಲು ಉತ್ಪಾದಕರ ಸಹಕಾರಿ ಸಂಘ 2023-24ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಮಂಗಳವಾರ ಮಾಹಿತಿ ನೀಡಿ ಮಾತನಾಡಿದರು.

ಸಂಘ ಅಧ್ಯಕ್ಷ ಸತೀಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ದ.ಕ. ಹಾಲು ಒಕ್ಕೂಟ ವಿಸ್ತರಣಾಧಿಕಾರಿ ಮಂಜುನಾಥ್ ಮೊಗವೀರ ರಾಸು ವಿಮೆ ಬಗ್ಗೆ ಲವಣ ಮಿಶ್ರಿತ ಹಾಗೂ ಸಮೃದ್ಧಿ ಮತ್ತು ಪಶು ಆಹಾರ ಬಳಕೆ ಬಗ್ಗೆ ಒಕ್ಕೂಟದಲ್ಲಿ ದೊರೆಯುವ ಯೋಜನೆ, ರೈತ ಕಲ್ಯಾಣ ಟ್ರಸ್ಟ್, ಅನುದಾನಗಳ ಬಗ್ಗೆ ಸಂಘ ಸದಸ್ಯರಿಗೆ ಮಾಹಿತಿ ನೀಡಿದರು.

2023-24ನೇ ಸಾಲಿನಲ್ಲಿ ಸಂಘ ಎರಡು ಲಕ್ಷದ ಒಂಬತ್ತು ಸಾವಿರ ರೂ. ಲಾಭ ಗಳಿಸಿದ್ದು ಶೇ.65 ಹಾಲು ಉತ್ಪಾದಕರಿಗೆ ಬೋನಸ್ ಹಾಗೂ ಶೇ.15 ಡಿವಿಡೆಂಡ್ ಘೋಷಣೆ ಮಾಡಲಾಯಿತು. ಸಂಘ ಉಪಾಧ್ಯಕ್ಷ ಗೋವಿಂದ ನಾಯ್ಕ, ನಿರ್ದೇಶಕರಾದ ಮಂದಾರ ಶೆಟ್ಟಿ, ಭಾಸ್ಕರ ಕೊಠಾರಿ, ತೇಜಪ್ಪ ಶೆಟ್ಟಿ, ಉಮಾಶಂಕರ ಶೆಟ್ಟಿ, ಚಂದ್ರಶೇಖರ, ಕಮಲ ಬಾಯಿ, ಭಾಗ್ಯಲಕ್ಷ್ಮೀ, ಸುಚಿತ್ರಾ ಶೆಟ್ಟಿ, ಭವಾನಿ ಆಚಾರ್ತಿ, ವನಿತಾ ಸಿ.ಶೆಟ್ಟಿ, ಹೈನುದಾರರು, ಹೈನುಗಾರ ಶೇಖರ ನಾಯ್ಕ ಮಿಯ್ಯರು, ಸಂಘದ ಸಿಬ್ಬಂದಿ ಉಪಸ್ಥಿತರಿದ್ದರು. ಸಂಘ ಮುಖ್ಯಕಾರ್ಯದರ್ಶಿ ಉಷಾ ನಾಯ್ಕ ಎಂ.ಆರ್.ಸ್ವಾಗತಿಸಿ, ವರದಿ ವಾಚಿಸಿ, ಹಾಲು ಪರೀಕ್ಷಕಿ ರೇಶ್ಮಾ ಶೆಟ್ಟಿ ವಂದಿಸಿದರು.

ಹೊರ್ಲಾಳಿ, ನಂಚಾರು, ನಾಲ್ಕೂರು ಈ ಭಾಗಗಳು ಗ್ರಾಮೀಣ ಪ್ರದೇಶವಾಗಿದ್ದು ಹೆಚ್ಚಿನ ಜನರು ಹೈನುಗಾರಿಕೆಯನ್ನು ಅವಲಂಬಿಸಿದ್ದಾರೆ. ಹೈನುಗಾರರಿಗೆ ಪಶುಚಿಕಿತ್ಸಾಲಯ ಮತ್ತು ಪಶುವೈದ್ಯರ ಅಗತ್ಯತೆ ಈ ಭಾಗದಲ್ಲಿ ಇದೆ.-ಶೇಖರ ನಾಯ್ಕ ಮಿಯ್ಯರು ಹೈನುಗಾರರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net