ಆರೋಗ್ಯ ಸೌಲಭ್ಯ ಪಡೆಯಿರಿ

gorebala
ಗೊರೇಬಾಳದಲ್ಲಿ ಆರೋಗ್ಯ ಉಚಿತ ಶಿಬಿರವನ್ನು ಗ್ರಾಪಂ ಅದ್ಯಕ್ಷೆ ಎಚ್.ಕೆ.ಬಸಮ್ಮ ಅಶೋಕ್ ಮ್ಯಾಗಳಮನಿ ಉದ್ಘಾಟಿಸಿದರು. ಪಿ.ಸಿ.ಟಿ.ಸಿ ಆಪ್ತ ಸಮಾಲೋಚಕ ಓಂ ಪ್ರಸಾದ ಸುತ್ತತ್ತಿ, ಸೇಂಟ್ ಲುಕ್ಸ್ ಮಡಿಕಲ್ ಸೊಸೈಟಿಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಶ್ರೀನಾಗರಾಜ ರಟಕಲ್, ವಲಯ ಮೇಲ್ವಿಚಾರಕ ರಾಯಪ್ಪ, ಗ್ರಾಮದ ಮುಖಂಡರಾದ ಮಲ್ಲನಗೌಡ, ಬೀರಪ್ಪ, ಶರಣೇಗೌಡ ಪೋ.ಪಾ, ಬಸವರಾಜ ಸುಬ್ಬಣ್ಣನವರ, ಆರೋಗ್ಯ ಇಲಾಖೆಯ ಅಂಬಮ್ಮ, ಚಾಂದ್ ಪಾಷಾ, ಅಂಗನವಾಡಿ ಕಾರ್ಯಕರ್ತೆ ಹಂಪಮ್ಮ, ಶಾಂತಮ್ಮ ಇತರರಿದ್ದರು.
Published on

ಗೊರೇಬಾಳ: ಸರ್ಕಾರ ಆರೋಗ್ಯ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುತ್ತಿದೆ ಅದರ ಸದುಪಯೋಗ ಪಡೆದುಕೊಳ್ಳಿ ಎಂದು ಗ್ರಾಪಂ ಅಧ್ಯಕ್ಷೆ ಶ್ರೀಮತಿ ಎಚ್.ಕೆ.ಬಸಮ್ಮ ಅಶೋಕ್ ಮ್ಯಾಗಳಮನಿ ತಿಳಿಸಿದರು.

ವಿವಿಧ ಆರೋಗ್ಯ ಘಟಕದಿಂದ ಗೊರೇಬಾಳದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ಶಿಬಿರದಲ್ಲಿ ಮಾತನಾಡಿದರು. ಪಿ.ಸಿ.ಟಿ.ಸಿ ಆಪ್ತ ಸಮಾಲೋಚಕರಾದ ಶ್ರೀ ಓಂ ಪ್ರಸಾದ ಸುತ್ತತ್ತಿ ಮಾತನಾಡಿ, ಎಚ್.ಐ.ವಿ ಎಂದರೇನು? ಹೇಗೆ ಹರಡುತ್ತದೆ, ರಕ್ತ ತಪಾಷಣೆ, ಲೈಂಗಿಕ ರೋಗದ ಲಕ್ಷಣಗಳ ಬಗ್ಗೆ ತಿಳಿಸಿ, ರೋಗವು ಉಲ್ಬಣಗೊಳ್ಳುವರೆಗೆ ಕಾಯುತ್ತಾ ಕುಳಿತುಕೊಳ್ಳದೆ ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.

ಸೇಂಟ್ ಲುಕ್ಸ್ ಮಡಿಕಲ್ ಸೊಸೈಟಿಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಶ್ರೀನಾಗರಾಜ ರಟಕಲ್, ವಲಯ ಮೇಲ್ವಿಚಾರಕ ಶ್ರೀ ರಾಯಪ್ಪ, ಊರಿನ ಮುಖಂಡರಾದ ಶ್ರೀಮಲ್ಲನಗೌಡ, ಬೀರಪ್ಪ, ಪಿಎಚ್‌ಸಿಒ ಗಳಾದ ಶ್ರೀಮತಿ ಅಂಬಮ್ಮ , ಶ್ರೀ ಚಾಂದ್ ಪಾಷಾ, ಅಂಗನವಾಡಿ ಕಾರ್ಯಕರ್ತೆರು ಶ್ರೀಮತಿ ಹಂಪಮ್ಮ , ಶಾಂತಮ್ಮ ಲಿಂಗ ವರ್ಕರ್, ಶ್ರೀಮತಿ ವೆಂಕಟಲಕ್ಷ್ಮೀ, ಬಾಬಮ್ಮ ಮೋದಿನ ಸಾಬ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net