ಆರೋಗ್ಯ ವೃದ್ಧಿಗೆ ಕ್ರೀಡೆಗಳು ಸಹಕಾರಿ

23 DVD 04
ದೇವದುರ್ಗ ತಾಲೂಕು ಮಸರಕಲ್‌ನಲ್ಲಿ ಆಯೋಜಿಸಿದ್ದ ಖೋಖೋ ಪಂದ್ಯಾವಳಿಗೆ ಚಾಲನೆ ನೀಡಲಾಯಿತು. ಮುಖ್ಯಶಿಕ್ಷಕ ರಾಮಚಂದ್ರ ಕಟ್ಟಿಮನಿ, ಗ್ರಾಪಂ ಅಧ್ಯಕ್ಷೆ ನೂಹರ್ ಬೇಗಂ, ರವಿ ಕಟ್ಟಿಮನಿ, ಗುರುಗೇಂದ್ರ, ಯಲ್ಲಾಲಿಂಗ, ಡೆವಿಡ್, ಬಾಲರಾಜ, ಶಿಕ್ಷಕ ಸುರೇಶ ಕಟ್ಟಿಮನಿ ಇತರರಿದ್ದರು.
Published on

ದೇವದುರ್ಗ: ಕ್ರೀಡೆಗಳಿಂದ ದೈಹಿಕ ಸದೃಢತೆ ಹಾಗೂ ಮಾನಸಿಕ ಆರೋಗ್ಯವಾಗಿರಲು ಸಾಧ್ಯವಿದೆ ಎಂದು ಮುಖ್ಯಶಿಕ್ಷಕ ರಾಮಚಂದ್ರ ಕಟ್ಟಿಮನಿ ಹೇಳಿದರು.

ತಾಲೂಕಿನ ಮಸರಕಲ್ ಗ್ರಾಮದ ಪ್ರೌಢಶಾಲೆಯಲ್ಲಿ ಜೈ ಭೀಮ್ ಖೋಖೋ ಕ್ಲಬ್‌ನಿಂದ ಆಯೋಜಿಸಿದ್ದ ಖೋಖೋ ಓಪನ್ ಪಂದ್ಯಾವಳಿಗೆ ಚಾಲನೆ ನೀಡಿ ಸೋಮವಾರ ಮಾತನಾಡಿದರು. ಆಧುನಿಕ ಭರಾಟೆ, ಮೊಬೈಲ್, ದೂರದರ್ಶನ ಹಾವಳಿಯಿಂದ ಯುವಕರಲ್ಲಿ ಕ್ರೀಡಾಶಕ್ತಿ ಕಡಿಮೆಯಾಗುತ್ತಿದೆ. ಕ್ರೀಡೆ ಎಂದರೆ ಕೇವಲ ಕ್ರಿಕೆಟ್ ಎನ್ನುವ ಮನೋಸ್ಥಿತಿಗೆ ಬಂದಿದ್ದೇವೆ.

ಯುವಕರು ಆಟೋಟಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಗ್ರಾಮೀಣ ಭಾಗದ ಕ್ರೀಡೆಗಳಾದ ಕಬ್ಬಡಿ, ಖೋಖೋ, ಉಸುಕಿನ ಚೀಲ ಎತ್ತುವ ಸ್ಪರ್ಧೆ, ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ ಸೇರಿ ವಿವಿಧ ಕ್ರೀಡೆಗಳು ಕಣ್ಮರೆಯಾಗುತ್ತಿವೆ.

ಮಸರಕಲ್ ಗ್ರಾಮದ ಯುವಕರು ಖೋಖೋ ಓಪನ್ ಟೂರ್ನಾಮೆಂಟ್ ಆಯೋಜನೆ ಮಾಡಿದ್ದು ಶ್ಲಾಘನೀಯ. ಇಂಥ ಕ್ರೀಡಾಕೂಟಗಳು ಇನ್ನು ಹೆಚ್ಚುಹೆಚ್ಚಾಗಿ ನಡೆಯಬೇಕು ಎಂದರು. ಕ್ರೀಡಾಕೂಟದಲ್ಲಿ ಜೈ ಭೀಮ್ ಖೋಖೋ ತಂಡ ಪ್ರಥಮ ಸ್ಥಾನ ಪಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net