"ಜಿಕಾ ವೈರಸ್​​ ಬಂದರು ತೀರಾ ಆತಂಕ ಬೇಡ" ಆರೋಗ್ಯ ಇಲಾಖೆಯ ಆಯುಕ್ತ ರಂದೀಪ್

zika virus
Published on

ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಹೋಬಳಿಯ ತಲಕಾಯಲಬೆಟ್ಟ ಗ್ರಾಮದ ವ್ಯಾಪ್ತಿಯಲ್ಲಿ ಮಾರಕ ಜಿಕಾ ವೈರಸ್ ಪತ್ತೆಯಾಗಿದೆ. ಈ ವೈರಸ್​​ ಆತಂಕ ಎಲ್ಲಡೆ ಮನೆ ಮಾಡಿದೆ. ಈ ಕುರಿತಾಗಿ ಆರೋಗ್ಯ ಇಲಾಖೆಯ ಆಯುಕ್ತ ರಂದೀಪ್​ ಪ್ರತಿಕ್ರಿಯೆ ನೀಡಿದ್ದಾರೆ.

ಚಿಕ್ಕಬಳ್ಳಾಪುರದ ಮೂರು ಭಾಗದಲ್ಲಿ ಒಂದು ಸೊಳ್ಳೆಯ ಪೂಲ್ ನಲ್ಲಿ ಝೀಕಾ ಪತ್ತೆಯಾಗಿದೆ. ಎನ್​ಐವಿ ಪುಣೆಯಿಂದ ಪತ್ತೆಯಾಗಿದೆ. ಮೂರು ಗ್ರಾಮ ವ್ಯಾಪ್ತಿಯಲ್ಲಿ ಈಗಾಗಲೇ ಅಧಿಕಾರಿಗಳು ತೀವ್ರ ಎಚ್ಚರಿಕೆ ವಹಿಸಿದ್ದಾರೆ

ಆರೋಗ್ಯ ಇಲಾಖೆಯ ಆಯುಕ್ತ ರಂದೀಪ್​ ಮಾತನಾಡಿ, ರಾಜ್ಯಾದ್ಯಂತ ಝಿಕಾ ವೈರಸ್ ಪತ್ತೆಗಾಗಿ ಸ್ಯಾಂಪಲ್ಸ್ ಟೆಸ್ಟ್ ಮಾಡಲಿದ್ದೇವೆ. ಹೊಸದಾಗಿ ಶೀಘ್ರದಲ್ಲಿ ಇದಕ್ಕಾಗಿ ಗೈಡ್ ಲೈನ್ಸ್ ಹೊರಡಿಸಲಿದ್ದೇವೆ. ಡೆಂಘೀ ರೀತಿಯಲ್ಲಿ ತುಂಬಾ ಗಂಭೀರ ಸ್ವರೂಪವಿಲ್ಲ. ಮರಣದ ಪ್ರಮಾಣದ ಕಡಿಮೆ ಇರುತ್ತದೆ‌. ಆದರೆ ಗರ್ಭಿಣಿಯರು ಎಚ್ಚರಿಕೆ ವಹಿಸಬೇಕು. ಮಗುವಿ‌ನ ಬ್ರೈನ್ ಬೆಳವಣಿಗೆಗೆ ತೊಂದರೆಯಾಗಲಿದೆ. ಈ ಜಿಕಾ ವೈರಸ್​​ ಪಾಸಿಟಿವ್ ಬಂದರು ತೀರಾ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಜ್ವರ ಬಂದವರ ಸ್ಯಾಂಪಲ್ಸ್​ಗಳನ್ನು  ಈಗಾಗಲೇ ಪುಣೆಗೆ  ಕಳಿಸಲಾಗಿದೆ. ನೀರು ಇರುವ ಕಡೆ ಸೊಳ್ಳೆ ಉತ್ಪತ್ತಿಯಾಗುತ್ತದೆ. ಗರ್ಭಿಣಿಯರ ಪ್ರತ್ಯೇಕ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಮೂವರ ವರದಿ ಬರಬೇಕಾಗಿದೆ. ಅದರಲ್ಲಿ ಒಬ್ಬರು ಇವತ್ತು ಡಿಸ್​ಜಾರ್ಜ್ ಆಗುತ್ತಾರೆ. ಇನ್ನಿಬ್ಬರು ಮೊನ್ನೆಯೇ ಡಿಸ್​ಜಾರ್ಜ್ ಆಗಿದ್ದಾರೆ ಎಂದಿದ್ದಾರೆ.

ರೋಗ ಲಕ್ಷಣಗಳು ಏನು?

* ಕಣ್ಣು ಕೆಂಪಾಗುವಿಕೆ

* ತಲೆ ನೋವು

* ಜ್ವರ

* ಕೀಲುಗಳಲ್ಲಿ ನೋವು

* ಗಂಧೆಗಳು

* ಸ್ನಾಯುಗಳಲ್ಲಿ ನೋವು

ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ

* ನೀರು ಶೇಖರಣಾ ಪರಿಕರಗಳನ್ನು ಮುಚ್ಚಳದಿಂದ ಮುಚ್ಚಿಡಿ ಮತ್ತು ವಾರಕ್ಕೊಮ್ಮೆ ಸ್ವಚ್ಛಗೊಳಿಸಿ.

* ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಿ ಹಾಗೂ ಘನತ್ಯಾಜ್ಯ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿ.

* ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸಿ, ಮಕ್ಕಳು, ವಯೋವೃದ್ದರು ವಿಶ್ರಾಂತಿ ಪಡೆಯುವಾಗ ಸೊಳ್ಳೆ ಪರದೆ, ಸೊಳ್ಳೆ ನಿರೋಧಕಗಳನ್ನು ಬಳಸಿ.

* ಸೊಳ್ಳೆಗಳು ಸಾಮಾನ್ಯವಾಗಿ ಸಂತಾನೋತ್ಪತ್ತಿ ಮಾಡುವುದು ನಿಂತ ನೀರಲ್ಲಿ. ಹೀಗಾಗಿ ಮನೆಯ ಸುತ್ತಲೂ ನೀರು ನಿಲ್ಲದಂತೆ ಮುಂಜಾಗ್ರತೆ ವಹಿಸಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ, ವೈರಸ್ ಹರಡುವ ಸಾಧ್ಯತೆ ಕಡಿಮೆಯಾಗುತ್ತೆ.

ರೋಗ ಲಕ್ಷಣಗಳು ಸೌಮ್ಯ ಹಾಗೂ ಸಾಧಾರಣ ಸ್ವರೂಪವಾಗಿದ್ದು, 2 ರಿಂದ 7 ದಿನಗಳವರೆಗೆ ಇರುತ್ತದೆ. ಗರ್ಭಿಣಿಯರು ವಿಶೇಷವಾಗಿ ಎಚ್ಚರಿಕೆ ವಹಿಸಬೇಕು. ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಯಾವುದೇ ರೋಗ ಲಕ್ಷಣಗಳು ಕಂಡುಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆ/ವೈದ್ಯರನ್ನು ಸಂಪರ್ಕ ಮಾಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net