

ಉಳ್ಳಾಲ: ತಲಪಾಡಿ ದೇವಿನಗರದ ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ನ.25ರಿಂದ 30ರವರೆಗೆ ನಡೆಯಲಿರುವ ಆರೋಗ್ಯ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಸೋಮವಾರ ಉದ್ಘಾಟನೆಗೊಂಡಿತು.
ಪ್ರಾಂಶುಪಾಲ ಡಾ.ಸಂದೀಪ್ ಬೇಕಲ್ ಶಿಬಿರ ಉದ್ಘಾಟಿಸಿದರು. ಉಪ ವೈದ್ಯಕೀಯ ಅಧೀಕ್ಷಕಿ ಡಾ.ಸಪ್ನಾ ದಿನೇಶ್ ಭಂಡಾರಿ, ಶಿಬಿರದ ತಜ್ಞರಾದ ಡಾ.ಶಿಲ್ಪಾ ಸೂರಜ್, ಡಾ.ಸ್ವಾತಿ ಎನ್., ಡಾ.ಎಲ್ಸ ಜೋಸ್, ಡಾ.ನಿಧಿನ್ ಬೋಬನ್ ಇನ್ನಿತರ ವೈದ್ಯರು ಉಪಸ್ಥಿತರಿದ್ದರು.
ಪಂಚಕರ್ಮ, ಸ್ವಸ್ಥವೃತ್ತ ಮತ್ತು ಯೋಗ ವಿಭಾಗಗಳ ವತಿಯಿಂದ ನಡೆಯುವ ಶಿಬಿರದಲ್ಲಿ ಸ್ಥೂಲಕಾಯ ಅಥವಾ ಬೊಜ್ಜು, ಮಧುಮೇಹ, ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಗಳಿಗೆ ಉಚಿತ ತಪಾಸಣೆ, ಔಷಧಗಳು, ಆಹಾರ ಪದ್ಧತಿ ಮತ್ತು ಜೀವನಶೈಲಿಯ ಸಲಹೆಗಳನ್ನು ನೀಡಲಾಗುವುದು. ಈ ಮೇಲ್ಕಂಡ ಸಮಸ್ಯೆಗಳಿಗೆ ಯೋಗ, ಪ್ರಾಣಾಯಾಮ ಮತ್ತು ಪಂಚಕರ್ಮ ಚಿಕಿತ್ಸೆಗಳು ಲಭ್ಯವಿವೆ. ಹೆಚ್ಚಿನ ವಿವರಗಳಿಗಾಗಿ ದೂ.ಸಂ.: 89711 53232ಗೆ ಸಂಪರ್ಕಿಸುವಂತೆ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.