ನಿವೃತ್ತ ಸರ್ಕಾರಿ ನೌಕರರ ಆರೋಗ್ಯ ತಪಾಸಣೆ

SANMAN NRD
Published on

ನರಗುಂದ: ನಿವೃತ್ತ ಸರ್ಕಾರಿ ನೌಕರರಿಗೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯಗಳಿಲ್ಲ. ಎಲ್ಲರೂ ಸಂಘಟಿತರಾಗಿ ಹೋರಾಟ ಮಾಡಬೇಕಿದೆ ಎಂದು ನಿವೃತ್ತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಂ. ಅಳಗವಾಡಿ ಹೇಳಿದರು.

ಪಟ್ಟಣದ ಶ್ರೀ ಬಸವೇಶ್ವರ ಸಮುದಾಯ ಭವನದಲ್ಲಿ ನಿವೃತ್ತ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದಿಂದ ತಾಲೂಕಿನ ನಿವೃತ್ತ ಸರ್ಕಾರಿ ನೌಕರರು ಹಾಗೂ ಹಿರಿಯ ನಾಗರಿಕರಿಗೆ ಶನಿವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.

ಸಂಘದ ಜಿಲ್ಲಾಧ್ಯಕ್ಷ ಬಿ.ಬಿ. ಹೂಗಾರ, ತಾಲೂಕಾಧ್ಯಕ್ಷ ಬಿ.ಎಂ. ಬೆಳಹಾರ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಚನ್ನಬಸಪ್ಪ ಕಂಠಿ ಮಾತನಾಡಿದರು. ಶಿಬಿರದಲ್ಲಿ ವಿವಿಧ ಕಾಯಿಲೆಗಳಿಗೆ ಸಂಬಂಧಿಸಿದ 154 ಜನರಿಗೆ ಉಚಿತ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಯಿತು. ಸಂಘದ ಗೌರವಾಧ್ಯಕ್ಷ ಎಸ್.ಆರ್. ಹಿರೇಮಠ, ಎಸ್.ಬಿ. ಭಜಂತ್ರಿ, ಡಾ. ಭುವನೇಶ್ವರ ಆರಾಧ್ಯ, ಡಾ. ಪುನೀತ ಪೂಜಾರ, ಡಾ. ಪಲ್ಲವಿ ಕರಡಿಗುಡ್ಡ, ಡಾ. ಗೋವಿಂದ ದೇಸಾಯಿ, ಡಾ. ಸುನೀಲ ಮಾಳಗಿ, ಡಾ. ಪ್ರವೀಣ ಮೇಟಿ, ಡಾ. ಅಮಿತ ಸತ್ತೂರ, ಕರಾಡಿ, ಎಸ್.ಬಿ. ಗೌಡಪ್ಪಗೌಡ್ರ, ಬಿ.ಎಂ. ಕಲ್ಲನಗೌಡ್ರ, ಎಚ್.ಎಸ್. ಬೆಳಕೊಪ್ಪದ, ಎಸ್.ಜಿ. ದೇಶಪಾಂಡೆ, ಎಚ್.ಎಸ್. ಆದೆಪ್ಪನವರ, ಎಚ್.ಎ. ಕಣವಿ, ಜಿ.ವಿ. ಬಡಿಗೇರ, ಟಿ.ಆರ್. ಉಳ್ಳೇಗಡ್ಡಿ, ಎಂ.ಎಸ್. ಎಲಿಗಾರ, ಕೆ.ಎಸ್. ದೊಡಮನಿ, ಬಿ.ಆರ್. ಬ್ಯಾಹಟ್ಟಿ, ಎಂ.ಡಿ. ಗುದಗಿ, ಇತರರು ಉಪಸ್ಥಿತರಿದ್ದರು. ಎಂ.ಎಸ್. ಯಾವಗಲ್ಲ, ಎಸ್.ಬಿ. ಭಜಂತ್ರಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net