

ಉಪ್ಪಿನಬೆಟಗೇರಿ: ತಡಕೋಡ ಗ್ರಾಮದ ಕಿರಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಆರೋಗ್ಯ ಶಿಬಿರ ಜರುಗಿತು.
ತಡಕೊಡ ಕಿರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನೀಲಮ್ಮ ಎಚ್. ಮಾತನಾಡಿ, ಆರೋಗ್ಯ ಶಿಬಿರಗಳಲ್ಲಿ ಉಚಿತ ತಪಾಸಣೆ ಹಾಗೂ ಔಷಧೋಪಚಾರದ ಸೇವೆ ಪಡೆಯಬೇಕು ಎಂದು ಸಲಹೆ ನೀಡಿದರು.
18ಜನ ಅಂಗವಿಕಲರು ಹಾಗೂ 22 ಹಿರಿಯ ನಾಗರಿಕರು ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಂಡರು. ಪಿಡಿಒ ವಿರೂಪಾಕ್ಷಯ್ಯ ಕುಲಕರ್ಣಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೂಡ್ಡವ್ವ ಕರಿಕಟ್ಟಿ, ಉಪಾಧ್ಯಕ್ಷ ಈರಣ್ಣ ಬಾರಕೇರ, ಸದಸ್ಯರಾದ ಶ್ರೀದೇವಿ ಬೆಳವಡಿ, ಗೌರಮ್ಮ ಅಕ್ಕಿ, ರಜೀಯಾಬೇಗಂ ಜಿಗರಿ, ರವೀಂದ್ರ ಪಾಟೀಲ ಹಾಗೂ ವೀರನಗೌಡ ಮರಿಗೌಡರ, ಆಶಾ ಕಾರ್ಯಕರ್ತೆಯರು ಇದ್ದರು.