

ಬೆಳಗಾವಿ : ನರೇಗಾ ಯೋಜನೆಯಡಿ ಕೂಲಿ ಕೆಲಸ ಕೊಡುವುದು ಅಷ್ಟೇ ಅಲ್ಲದೇ ಸರ್ಕಾರ ಕೆಲಸದ ಸ್ಥಳದಲ್ಲಿ ಕೂಲಿಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡುತ್ತಿದೆ. ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಿತ್ತೂರು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಲಿಂಗರಾಜ ಹಲಕರ್ಣಿಮಠ ತಿಳಿಸಿದರು.
ಉಗರಖೋಡ ಗ್ರಾಮ ಪಂಚಾಯತಿ ವ್ಯಾಪ್ತಿಯ ದೇಮಟ್ಟಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮ ಆರೋಗ್ಯ ಅಭಿಯಾನದಡಿ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.
ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮನರೇಗಾ ಕೂಲಿಕಾರ್ಮಿಕರಿಗೆ ಅನೂಕೂಲವಾಗಲಿ ಎಂದು ಈ ಶಿಬಿರ ಹಮ್ಮಿಕೊಳ್ಳಲಾಗಿದೆ. ಸ್ವಯಂ ಪ್ರೇರಣೆಯಿಂದ ಬಿಪಿ ಶುಗರ್, ಕ್ಷಯ ರೋಗ ಸೇರಿದಂತೆ ಇತರೆ ರೋಗಗಳ ತಪಾಸಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಿಗೆ ವೈದರೊಂದಿಗೆ ಸಲಹೆ ಪಡೆದು ಒಳ್ಳೆ ಆರೋಗ್ಯ ಕಾಪಾಡಿಕೊಳ್ಳಿ ಎಂದರು.
ಬೈಲೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾರಾದ ಡಾ. ಚೇತನ ಪಿಂಗಾಡಿ, ಅಧ್ಯಕ್ಷರು ಮಂಜುಳಾ ತಿಗಡಿ, ಉಪಾಧ್ಯಕ್ಷರು ಶಿಲ್ಪಾ ನಾಡಗೌಡರ, ಸದಸ್ಯರು ಶಫೀಕ್ ಹವಾಲ್ದಾರ, ನಿಂಗಪ್ಪ ಅಂಬಡಗಟ್ಟಿ, ಚನ್ನವ್ವ ತೋಟನ್ನವರ, ಶಿಲ್ಪಾ ಅಪ್ಪೋಚಿ, ಪಿಡಿಓ ಶಿವಲಿಂಗಯ್ಯ ಗುರುವೈನವರ, ಐಇಸಿ ಸಂಯೋಜಕಿ ಎಸ್.ಬಿ.ಜವಳಿ, ಕಾರ್ಯದರ್ಶಿ ರಾಮಲಿಂಗಪ್ಪ ವನ್ನೂರ, khtp ಯ ತಾಲೂಕು ಸಂಯೋಜಕ ರಾಘವೇಂದ್ರ ಬಾಗೇವಾಡಿ, ಗ್ರಾಮ ಕಾಯಕಮಿತ್ರ ಕಸ್ತೂರಿ ಚಕಡಿ, ಸುಂದರ ತೆಳಗಡೆ, ಮಂಜುನಾಥ ಪೂಜೆರ, ಮಂಜುಳಾ ಕೊನಶಿ, ಮಂಜುನಾಥ ಅಗಸರ, ಆಶಾ ಕಾರ್ಯಕರ್ತೆಯರು, ಆರೋಗ್ಯ ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿಗಳು ಹಾಜರಿದ್ದರು.