

ಮೈಸೂರು: ಹನೂರು ತಾಲೂಕಿನ ಬಂಡಹಳ್ಳಿಯಲ್ಲಿ ಜ.7ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ವಕೀಲೆ ಎಂ.ಪೂರ್ಣಿಮಾ ತಿಳಿಸಿದರು.
ಮೂಲತಃ ಚಾಮರಾಜನಗರದ ನಾನು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಕೀಲ ವೃತ್ತಿ ನಿರ್ವಹಿಸಿದ್ದೇನೆ. ನನ್ನ ಜಿಲ್ಲೆಯಲ್ಲಿ ಸೇವೆ ಸಲ್ಲಿಸಬೇಕೆಂದು ನಿರ್ಧರಿಸಿ 7ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 2.30ರವರೆಗೆ ಬಂಡಳ್ಳಿಯ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ಸುಯೋಗ್ ಆಸ್ಪತ್ರೆ ಸಹಯೋಗದಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಮಾನ್ಯ ರೋಗ ತಪಾಸಣೆ, ಸ್ತ್ರೀರೋಗ ಮತ್ತು ಪ್ರಸೂತಿ, ಮೂಳೆ ಮತ್ತು ಕೀಲುರೋಗ, ಮೂತ್ರ ತಪಾಸಣೆ, ಕಿವಿ, ಮೂಗು ಮತ್ತು ಗಂಟಲು, ಹೃದಯ ಸಂಬಂಧಿ ಕಾಯಿಲೆ, ಬಿಪಿ, ಇಸಿಜಿ, ಎಕೊ, ಸಕ್ಕರೆ ಕಾಯಿಲೆಗಳಿಗೆ ಸಂಬಂಧಿಸಿದ ತಜ್ಞರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಮಹದೇಶ್ವರ ಬೆಟ್ಟಕ್ಕೆ ಸುಮಾರು ಹತ್ತು ಕಿ.ಮೀ. ನಡೆದು ವಿದ್ಯಾಭ್ಯಾಸಕ್ಕೆ ಬರುತ್ತಿದ್ದ ವಿದ್ಯಾರ್ಥಿನಿಯರಿಗೆ ಟ್ಯಾಬ್ ವಿತರಣೆ, ಮಹಿಳೆಯರ ಸ್ವಾವಲಂಬನೆಗಾಗಿ ತರಬೇತಿ, ಬೆಂಗಳೂರಿನ ಸ್ಲಂವೊಂದರಲ್ಲಿ ಗ್ರಂಥಾಲಯ ಮೊದಲಾದವನ್ನು ಸೇವಾ ಕಾರ್ಯ ಮಾಡಿದ್ದೇನೆ. ಇದರ ಹಿಂದೆ ಯಾವುದೇ ಉದ್ದೇಶವಿಲ್ಲ. ಕೇವಲ ಸೇವೆ ಸಲ್ಲಿಸಬೇಕೆಂಬುದಾಗಿದೆ ಎಂದು ವಿವರಿಸಿದರು. ಮುಖಂಡ ಬಸವರಾಜು ಹಾಜರಿದ್ದರು.