ಆರೋಗ್ಯ ತಪಾಸಣಾ ಶಿಬಿರ

14 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಹಿಳಾ ದಿನಾಚರಣೆ ನಿಮಿತ್ತ ಎಸ್​ಡಿಎಂ ನಾರಾಯಣ ಹಾರ್ಟ್​ ಸೆಂಟರ್​, ಹು-ಧಾ ನಾಗರಿಕರ ಪರಿಸರ ಸಮಿತಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ನಗರದ ಪರಿಸರ ಭವನ ಉಚಿತ ಹೃದಯ ರೋಗ ತಪಾಸಣಾ ಉಚಿತ ಶಿಬಿರ ಏರ್ಪಡಿಸಲಾಗಿತ್ತು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಪ್ರದಿಪ ಶೆಟ್ಟಿ ಮಾತನಾಡಿ, ಮಹಿಳೆಯರಿಗೆ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಿರುವುದು ಶ್ಲಾಘನೀಯ. ನಾರಾಯಣ ಹಾರ್ಟ್​ ಸೆಂಟರ್​ ಇಂತಹ ಅನೇಕ ಕಾರ್ಯಗಳನ್ನು ನಡೆಸುವ ಮೂಲಕ ಜನ ಮೆಚ್ಚುಗೆ ಗಳಿಸಿದೆ ಎಂದರು.

ಎಸ್​ಡಿಎಂ ನಾರಾಯಣ ಹಾರ್ಟ್​ ಸೆಂಟರ್​ ಮಾರುಕಟ್ಟೆ ವಿಭಾಗದ ಹಿರಿಯ ಮೇಲ್ವಿಚಾರಕ ಅಜಯ ಹುಲಮನಿ ಮಾತನಾಡಿ, ಇಂದಿನ ದಿನದಲ್ಲಿ ಹೃದಯ ರೋಗದ ಹೆಚ್ಚಳ, ಕಾರಣ ಮತ್ತು ಶಿಬಿರದ ಮಹತ್ವ ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಹು-ಧಾ ನಾಗರಿಕ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ ಮಾತನಾಡಿ, ಹೃದಯ ರೋಗದ ಹೆಚ್ಚಳಕ್ಕೆ ಕಳವಳ ವ್ಯಕ್ತಪಡಿಸಿದರು. ಇಂದಿನ ಸಮಾಜಕ್ಕೆ ಇಂತಹ ಶಿಬಿರಗಳ ಅವಶ್ಯಕತೆ ಇದೆ. ಸಂಘ ಸಂಸ್ಥೆಗಳು ಶಿಬಿರಗಳಿಗೆ ಹೆಚ್ಚು ಮಹತ್ವ ನೀಡಬೇಕು. ಜನರ ಉತ್ತಮ ಆರೋಗ್ಯಕ್ಕಾಗಿ ಒಳ್ಳೆಯ ಹವ್ಯಾಸ, ಒಳ್ಳೆಯ ಜೀವನಶೈಲಿ ಅನುಸರಿಸಬೇಕು ಎಂದರು.

ಶಿಬಿರದಲ್ಲಿ ಬಿ.ಪಿ, ಶುಗರ, ಇಸಿಜಿ, ಇಕೊ ತಪಾಸಣೆ ಜತೆಗೆ ವೈದ್ಯರೊಂದಿಗೆ ಸಮಾಲೋಚನೆ ನಡೆಸಲಾಯಿತು. 150ಕ್ಕೂ ಹೆಚ್ಚು ಜನರು ಇದರ ಸದುಪಯೋಗ ಪಡೆದರು.

ಎಸ್​ಡಿಎಂ ನಾರಾಯಣ ಹಾರ್ಟ್​ ಸೆಂಟರ್​ನ ವೈದ್ಯ ಡಾ. ಮಹಾಂತೇಶ ಉಳ್ಳಾಗಡ್ಡಿ, ಸಿಬ್ಬಂದಿ ನಾಗರಾಜ ಬಡಿಗೇರ, ಹು-ಧಾ ನಾಗರಿಕ ಪರಿಸರ ಸಮಿತಿ ಕಾರ್ಯದರ್ಶಿ ಡಾ. ಉಲ್ಲಾಸ ಕುಲಕರ್ಣಿ, ಸಹಕಾರ್ಯದರ್ಶಿ ಐ.ಎಲ್​. ಪಾಟೀಲ, ಎಸ್​.ಜಿ. ಬೆಟಗೇರಿ, ಅಶೋಕ ಕೆ., ಇದ್ದರು.

ದುಂಡೇಶ ತಡಕೋಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net