ಆರೋಗ್ಯ ತಪಾಸಣೆ ಮಾಡಿಸಿಕೊಂಡು ವಾಪಸ್ ಹೋಗುತ್ತಿದ್ದಾಗ ಕಾರ್ ಪಲ್ಟಿಯಾಗಿ ಇಬ್ಬರ ಸಾವು

300420 Mannigeri Camp Near Car Accident
Published on

ಸಿಂಧನೂರು : ತಾಲೂಕಿನ ಜವಳಗೇರಾ ಹತ್ತಿರದ ಮಣ್ಣಿಕೇರಿಕ್ಯಾಂಪ್ ಬಳಿ ಗುರುವಾರ ಕಾರ್ ಪಲ್ಟಿಯಾಗಿದ್ದು, ಗೋಪಾಲ ಕೆಟಿ ದೊಡ್ಡಿ(25), ಚಾಲಕ ಲಕ್ಷ್ಮಣ(30) ಮೃತಪಟ್ಟಿದ್ದಾರೆ. ಇಬ್ಬರು ಮಹಿಳೆಯರು ತೀವ್ರವಾಗಿ ಗಾಯಗೊಂಡಿದ್ದು, ರಾಯಚೂರಿನ ರಿಮ್ಸ್‌ಗೆ ದಾಖಲಾಗಿದೆ. ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಅನುಮತಿ ಪಡೆದು ಬೆಂಗಳೂರಿಗೆ ತೆರಳಿ ವಾಪಸ್ ರಾಯಚೂರಿಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರ್ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ಕುರಿತು ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net