

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಹಿಳಾ ದಿನಾಚರಣೆ ನಿಮಿತ್ತ ಹು-ಧಾ ಮಹಾನಗರ ಪಾಲಿಕೆ, ಟಾಟಾ ಹಿಟಾಚಿ ಸಹಯೋಗದಲ್ಲಿ ಇಲ್ಲಿನ ಕಲ್ಯಾಣನಗರ ಸಮುದಾಯ ಭವನದಲ್ಲಿ ಮಹಿಳಾ ಪೌರ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.
ವಿಶೇಷವಾಗಿ ಸ್ತನ ಹಾಗೂ ಗರ್ಭಕೋಶದ ಕ್ಯಾನ್ಸರ್ ಕುರಿತು ನುರಿತ ತಜ್ಞ ವೈದ್ಯರು ಮಹಿಳಾ ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸಿದರು. ನಂತರ ಉಚಿತವಾಗಿ ಔಷಧಗಳನ್ನು ವಿತರಿಸಲಾಯಿತು.
ಶಿಬಿರವನ್ನು ಆರ್ಎಸ್ಎಸ್ನ ಶ್ರೀಧರ ನಾಡಗೀರ, ಪಾಲಿಕೆ ಸದಸ್ಯೆ ಜ್ಯೋತಿ ಪಾಟೀಲ, ವೈದ್ಯೆ ಗೀತಾ ಉತ್ತೂರ, ಟಾಟಾ ಹಿಟಾಚಿಯ ಪ್ರಶಾಂತ್ ದೀಕ್ಷಿತ್ ಚಾಲನೆ ನೀಡಿದರು. ಸಂಗೀತ ಎಂ, ವಲಯ ಆಯುಕ್ತ ಪ್ರಹ್ಲಾದ ರೆಡ್ಡಿ, ವಿ.ಬಿ. ಕೋಳಿವಾಡ, ನಿಂಗಪ್ಪ ಮಡಿವಾಳ, ಸುಮಾ ಕೋಟಿ, ಜ್ಯೋತಿ ಚುಳಕಿಮಠ, ಪಾಲಿಕೆ ಸಿಬ್ಬಂದಿ, ಇತರರು ಇದ್ದರು.