

ವಿಜಯವಾಣಿ ಸುದ್ದಿಜಾಲ ಧಾರವಾಡ
ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ ಧಾರವಾಡ ಸಂಸ್ಥೆಯು ಪ್ರಶಾಂತ ಹೆರಿಗೆ ಹಾಗೂ ಐವಿಎಫ್ ಆಸ್ಪತ್ರೆ, ಮುಗದ ಗ್ರಾಪಂ ಹಾಗೂ ಮುಗದ ಸಂಜೀವಿನಿ ಒಕ್ಕೂಟ ವತಿಯಿಂದ ಜು. 19ರಂದು ಮುಗದ ಗ್ರಾಮದ ಕಲ್ಮೇಶ್ವರ ಕಲ್ಯಾಣ ಮಂಟಪದಲ್ಲಿ ಮಹಿಳೆಯರು ಹಾಗೂ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ಅಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5ರವರೆಗೆ ಮಹಿಳೆಯರಿಗೆ ಉಚಿತ ರಕ್ತ ತಪಾಸಣೆ, ಥೈರಾಯ್ಡ ತಪಾಸಣೆ ನಡೆಸಲಾಗುವುದು. ಇದೇ ಸಮಯದಲ್ಲಿ "ಆರೋಗ್ಯವಂತ ಮಗು' ಸ್ಪರ್ಧೆ ಆಯೋಜಿಸಲಾಗಿದೆ. ವೈದ್ಯ ಡಾ. ಕೋಮಲ್ ಕುಲಕರ್ಣಿ, ಡಾ. ತೃಪ್ತಿ ತೊರ್ಕೆ ಶಿಬಿರ ನಡೆಸಿಕೊಡುವರು. ಮುಗದ ಗ್ರಾಮದ ಜನರು ಈ ಸೌಲಭ್ಯದ ಸದುಪಯೋಗ ಪಡೆಯಬೇಕು ಎಂದು ಕ್ಲಬ್ ಅಧ್ಯೆಕ್ಷೆ ಗೌರಿ ಮದಲಭಾವಿ ತಿಳಿಸಿದ್ದಾರೆ.