

ಕುಂದಾಪುರ: ದಿ.ಯು.ನರಸಿಂಹ ಕಾರಂತರ ಸ್ಮರಣಾರ್ಥ ಹಾಗೂ ಶ್ರೀ ಗೋಪಾಲಕೃಷ್ಣ ಯುವ ಸೇವಾ ಸಮಿತಿಯ ರಜತ ಮಹೋತ್ಸವದ ಸಂಭ್ರಮಾಚರಣೆ ಪ್ರಯುಕ್ತ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿಯ ಧರ್ಮದರ್ಶಿ ರಾಜೇಶ್ ಕಾರಂತ ನೇತೃತ್ವದಲ್ಲಿ ಉಪ್ಪಿನಕುದ್ರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ ಭಾನುವಾರ ನಡೆಯಿತು.
ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಾನಂದ ಕಾರ್ಯಕ್ರಮ ಉದ್ಘಾಟಿಸಿದರು. ತಲ್ಲೂರು ಗ್ರಾಪಂ ಅಧ್ಯಕ್ಷ ಗಿರೀಶ್ ಎಸ್.ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಶಂಕರ್ ಶೆಟ್ಟಿ ಅವರು ನೇತ್ರ ತಪಾಸಣೆ, ಚಿಕಿತ್ಸೆಯ ಕುರಿತು ಮಾಹಿತಿ ನೀಡಿದರು. ಶ್ರೀ ಅನ್ನಪೂರ್ಣ ಸೇವಾ ಬಂಧು ಟ್ರಸ್ಟ್ ಅಧ್ಯಕ್ಷ ಸಾಯಿನಾಥ ಶೇಟ್, ಉಪ್ಪಿನಕುದ್ರು ಶ್ರೀ ಗೋಪಾಲಕೃಷ್ಣ ಯುವ ಸೇವಾ ಸಮಿತಿ ಸಂಚಾಲಕ ಚಂದ್ರ ಕುಂದರ್, ಪ್ರಮುಖರಾದ ಶಿವರಾಮ್ ಆಚಾರ್, ಮಂಜುನಾಥ್ ಆಚಾರ್, ಅರುಣ, ಡಾ.ಅಮಿತಾ ಆಚಾರ್ಯ, ಡಾ.ರಶ್ಮಿ, ಡಾ.ಪ್ರಜ್ಞಾ ನವೀನ್, ರಾಘವೇಂದ್ರ ದೇವಾಡಿಗ, ಮಂಜುನಾಥ, ಆನಂದ ಬಿಲ್ಲವ, ನಾಗರಾಜ ಸೇರುಗಾರ್ ಮತ್ತಿತರರು ಉಪಸ್ಥಿತರಿದ್ದರು. ಸಾಯಿನಾಥ್ ಶೇಟ್ ವಂದಿಸಿದರು. ಸುನಿಲ್ ಕಾರ್ಯಕ್ರಮ ನಿರೂಪಿಸಿದರು.