ಹುಬ್ಬಳ್ಳಿ: ಇಲ್ಲಿಯ ಶ್ರೀ ಬಾಲಾಜಿ ಆಸ್ಪತ್ರೆ ಮತ್ತು ಕುಂದಗೋಳ ತಾಲೂಕು ಸಂಶಿಯ ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದ ವತಿಯಿಂದ ಶ್ರೀ ಗುರುದೇವ ಸಿದ್ದೇಶ್ವರ ಶಿವಯೋಗಿಗಳ 19ನೇ ಪುಣ್ಯಾರಾಧನೆ ಮಹೋತ್ಸವ ಅಂಗವಾಗಿ ಜು. 6ರಂದು ಆಶ್ರಮದ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 10ರಿಂದ ಮಧ್ಯಾಹ್ನ 1ಗಂಟೆಯವರೆಗೆ ನಡೆಯುವ ಶಿಬಿರದ ಸಾನ್ನಿಧ್ಯವನ್ನು ಆಶ್ರಮದ ಶ್ರೀ ಗುರುಸಿದ್ದೇಶ್ವರ ಸ್ವಾಮೀಜಿ ವಹಿಸಲಿದ್ದು, ಬಾಲಾಜಿ ಆಸ್ಪತ್ರೆ ಚೇರ್ಮನ್ ಡಾ. ಕ್ರಾಂತಿಕಿರಣ ಶಿಬಿರದ ನೇತೃತ್ವ ವಹಿಸಲಿದ್ದಾರೆ.
ನರರೋಗ, ಎಲುಬು-ಕೀಲು, ಹೃದ್ರೋಗಕ್ಕೆ ಸಂಬಂಧಿಸಿದ ವೈದ್ಯರು ತಪಾಸಣೆ ಮಾಡಲಿದ್ದು, ರಕ್ತದೊತ್ತಡ, ಸಕ್ಕರೆ ಕಾಯಿಲೆ ತಪಾಸಣೆ ಮಾಡಿ ಉಚಿತ ಸಲಹೆ, ಔಷಧ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.