

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬೆಳ್ತಂಗಡಿ ತಾಲೂಕು ಜ್ಞಾನವಿಕಾಸ ಕಾರ್ಯಕ್ರಮದಡಿ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ಮುಂಡಾಜೆ ವಲಯ ಶೌರ್ಯ ವಿಪತ್ತು ನಿರ್ವಹಣಾ ಘಟಕ, ಕುಕ್ಕಾವು ಜನಜಾಗೃತಿ ಗ್ರಾಮ ಸಮಿತಿ ಸಹಕಾರದೊಂದಿಗೆ ಉಜಿರೆ ಎಸ್ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಕುಕ್ಕಾವು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಕೂಡಬೆಟ್ಟು ಸದಾಶಿವೇಶ್ವರ ದೇವಸ್ಥಾನ ಆಡಳಿತ ಮುಕ್ತೇಸರ ವಾಸುದೇವ ಕಕ್ಕಿನಾಜೆ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಡಿಎಂ ಆಸ್ಪತ್ರೆ ಮೇಲ್ವಿಚಾರಕ ರವೀಂದ್ರ ಗುಡಿಗಾರ, ತಾಲೂಕಿನ ಯೋಜನಾಧಿಕಾರಿ ಯಶೋಧರ ಶುಭಹಾರೈಸಿದರು. ಗ್ರಾಪಂ ಅಧ್ಯಕ್ಷ ವಿನಯಚಂದ್ರ ಗೌಡ ಅಧ್ಯಕ್ಷತೆ ವಹಿಸಿದ್ದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ್ ವಾಂಜ, ಜನಜಾಗೃತಿ ಗ್ರಾಮ ಸಮಿತಿ ಅಧ್ಯಕ್ಷ ನೋನಯ್ಯ ಗೌಡ, ಬಂಗಾಡಿ ಸಿಎ ಬ್ಯಾಂಕ್ ಉಪಾಧ್ಯಕ್ಷ ಆನಂದ ಗೌಡ, ಒಕ್ಕೂಟ ಅಧ್ಯಕ್ಷರಾದ ಜಗದೀಶ್ ಕುಂಬಾರ, ಸುರೇಶ್, ಶೌರ್ಯ ವಿಪತ್ತು ಘಟಕ ಪ್ರತಿನಿಧಿ ಲೋಕೇಶ್ ಕುಂಬಾರ, ಮಕ್ಕಳತಜ್ಞ ಡಾ.ಪ್ರತೀತ್, ಮೂಳೆತಜ್ಞ ಡಾ.ರಜತ್, ಕಣ್ಣಿನ ತಜ್ಞ ಡಾ.ಸುಭಾಸ್ಚಂದ್ರ, ಡಾ.ರೋಹನ್ ದೀಕ್ಷಿತ್, ಪಿಜೀಷಿಯನ್ ಜನರಲ್ ಡಾ.ಪ್ರೌಸ್ಟಿಲ್ ಮತ್ತು ಡಾ.ಆದರ್ಶ, ಸೇವಾ ಪ್ರತಿನಿಧಿ ರಶ್ಮಿ ಸುರೇಖಾ ಮೊದಲಾದವರಿದ್ದರು. ಜ್ಞಾನ ವಿಕಾಸ ಕೇಂದ್ರದ ಸದಸ್ಯರಾದ ತ್ರಿವೇಣಿ ಸ್ವಾಗತಿಸಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಧುರಾ ವಸಂತ್ ನಿರೂಪಿಸಿದರು. ವಲಯ ಮೇಲ್ವಿಚಾರಕ ಜನಾರ್ದನ ವಂದಿಸಿದರು.