

ಬೆಳ್ತಂಗಡಿ: ಮಿಜಾರ್ ಆಳ್ವಾಸ್ ಹೋಮಿಯೋಪತಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮತ್ತು ರಾಜ್ಯ ಪ್ರಶಸ್ತಿ ಪಡೆದ ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಹೊಸಂಗಡಿ ಫ್ರೆಂಡ್ಸ್ ಕ್ಲಬ್ ಸಭಾಭವನದಲ್ಲಿ ನಡೆಯಿತು.
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.
ಆಳ್ವಾಸ್ ಹೋಮಿಯೋಪಥಿ ಆಸ್ಪತ್ರೆ ವೈದ್ಯ ಡಾ.ಭರತ್, ಡಾ.ಪ್ರಶಾಂತ್, ಡಾ.ಶಿವಕುಮಾರ್, ಪೆರಿಂಜೆ ಹಾಲು ಉತ್ಪಾದಕರ ಸಹಕಾರ ಸಂದ ಅಧ್ಯಕ್ಷ ಎನ್.ಸೀತಾರಾಮ ರೈ, ಬೆಳ್ತಂಗಡಿ ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯ ಇಸ್ಮಾಯಿಲ್ ಕೆ. ಪೆರಿಂಜೆ, ಕ್ಲಬ್ ಅಧ್ಯಕ್ಷ ಶ್ರೀಪತಿ ಉಪಾಧ್ಯಾಯ, ಗ್ರಾಪಂ ಸದಸ್ಯ ಆನಂದ ಬಂಗೇರ ಕೊಡಂಗೇರಿ, ಚಂದ್ರ ಪೇರಿ, ಭರತ್, ನಾಗೇಶ್ ಕೋಟ್ಯಾನ್ ಹೊಸಂಗಡಿ, ಸಚ್ಚಿದಾನಂದ ಪೆರಿಂಜೆ, ದೇವದಾಸ್, ರಾಜೇಶ್ ಸಹಕರಿಸಿದರು. ಶ್ರೀಪತಿ ಉಪಾಧ್ಯಾಯ ಸ್ವಾಗತಿಸಿದರು. ಸುಜಿತ್ ವಂದಿಸಿದರು.