

ಬೆಂಗಳೂರು ಪಿಇಎಸ್ ವಿಶ್ವವಿದ್ಯಾಲಯದ ಆಸ್ಪತ್ರೆ ವತಿಯಿಂದ ಜು.14ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 2 ಗಂಟೆಯವರೆಗೆ ‘ಉಚಿತ ಆರೋಗ್ಯ ತಪಾಸಣೆ ಶಿಬಿರ’ವನ್ನು ಹಮ್ಮಿಕೊಳ್ಳಲಾಗಿದೆ.
ಅತ್ತಿಬೆಲೆ ಸಮೀಪದ ವೀರಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಪಾಸಣಾ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಜನರಲ್ ಮೆಡಿಸನ್, ಸಾಮಾನ್ಯ ಸರ್ಜರಿ, ಮಕ್ಕಳ ವಿಭಾಗ, ಮನೋರೋಗ ಚಿಕಿತ್ಸೆ, ದಂತ ಪರೀಕ್ಷೆ, ಕೀಲು ಮತ್ತು ಮೂಳೆ, ಕಣ್ಣು, ಮೂಗು-ಗಂಟಲು, ಪ್ರಸೂತಿ ಮತ್ತು ಸೀರೋಗ ವಿಭಾಗಗಳ ತಜ್ಞ ವೈದ್ಯರಿಂದ ತಪಾಸಣೆ ನಡೆಸಲಾಗುತ್ತದೆ. ಅಧಿಕ ರಕ್ತದೊತ್ತಡ, ಮಧುಮೇಹದ ರಕ್ತಪರೀಕ್ಷೆ ಸೇವೆಗಳು ಲಭ್ಯವಿರುತ್ತವೆ.
ಹೆಚ್ಚಿನ ಮಾಹಿತಿಗಾಗಿ 98863 23754 ಸಂಪರ್ಕಿಸಬಹುದು ಎಂದು ಪಿಇಎಸ್ ವಿವಿ ಆಸ್ಪತ್ರೆ ಪ್ರಕಟಣೆ ತಿಳಿಸಿದೆ.