11ರಿಂದ 16ರ ವರೆಗೆ ಆರೋಗ್ಯ ತಪಾಸಣಾ ಶಿಬಿರ

11ರಿಂದ 16ರ ವರೆಗೆ ಆರೋಗ್ಯ ತಪಾಸಣಾ ಶಿಬಿರ
11ರಿಂದ 16ರ ವರೆಗೆ ಆರೋಗ್ಯ ತಪಾಸಣಾ ಶಿಬಿರ
Published on

ವಿಜಯಪುರ: ವಿಶ್ವ ಮಧುಮೇಹ ದಿನದ ಅಂಗವಾಗಿ ನಗರದ ಬಿಎಲ್​ಡಿಇ ಡೀಮ್ಡ್​ ವಿಶ್ವವಿದ್ಯಾಲಯದ ಬಿ.ಎಂ. ಪಾಟೀಲ ವೈದ್ಯಕಿಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ನ.11 ರಿಂದ 16 ರವರೆಗೆ ಪಾದರೋಗದ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಸಪ್ತಾಹ ಶಿಬಿರ ನಡೆಯಲಿದೆ.

ನ.14ರಂದು ವಿಶ್ವ ಮಧುಮೇಹ ದಿನದ ಹಿನ್ನೆಲೆ ಬಿಎಲ್​ಡಿಇ ಆಸ್ಪತ್ರೆಯ ಶಸಚಿಕಿತ್ಸೆ ವಿಭಾಗ ಮತ್ತು ಜಿಲ್ಲಾ ಶಸಚಿಕಿತ್ಸಕರ ಸಂದ ಸಹಯೋಗದಲ್ಲಿ ಶಿಬಿರ ಆಯೋಜಿಸಲಾಗಿದೆ. ಆಸ್ಪತ್ರೆಯ ಶಸಚಿಕಿತ್ಸೆ ಒಪಿಡಿ ನಂ.10 ರಲ್ಲಿ ಶಿಬಿರ ನಡೆಯಲಿದೆ.

ಶಿಬಿರದಲ್ಲಿ ರಕ್ತ ಮತ್ತು ಮೂತ್ರ ತಪಾಸಣೆ, ಬಯೋತಿಸಿಯೋ ಮೀಟರ್​: ಅಂಗಾಂಗಗಳ ಕಂಪನ ಾನ, ಮೋನೋಫಿಲಾಮೆಂಟ್​: ಸ್ಪರ್ಷದೋಷ, ಹ್ಯಾರಿಸ್​ ಮ್ಯಾಟ್​ : ಒತ್ತಡ ಅಂಕಗಳನ್ನು ತಪಾಸಣೆ ಮಾಡಲಾಗುವುದು ಎಂದು ಶಿಬಿರದ ಸಂಚಾಲಕ ಮತ್ತು ಶಸಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೋಟೆಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net