ಜಿತೊ ಹುಬ್ಬಳ್ಳಿ ಚಾಪ್ಟರ್​ನಿಂದ ಆರೋಗ್ಯ ತಪಾಸಣೆ ಶಿಬಿರ

New JITO NEW
Published on

ಹುಬ್ಬಳ್ಳಿ : ಇಲ್ಲಿನ ಕೇಶ್ವಾಪುರದ ಭಂಡಾರಿ ಸಭಾಂಗಣದಲ್ಲಿ ಜಿತೊ ಹುಬ್ಬಳ್ಳಿ ಚಾಪ್ಟರ್​ನಿಂದ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಶಿಬಿರ ಆಯೋಜಿಸಲಾಗಿತ್ತು.

ಮಧುಮೇಹ, ಫಿಸಿಯೋಥೆರಪಿ ಕುರಿತು ಡಾ. ಸಲೀಮಾ ಬಿಜಾಪುರಿ, ಭಾವನಾತ್ಮಕ ಆರೋಗ್ಯ ಮತ್ತು ಯೋಗಕ್ಷೇಮದ ಕುರಿತು ಪ್ರಿಯಾ ಉಚ್ಚಿಲ, ಬಾಯಿಯ ಆರೋಗ್ಯದ ಕುರಿತು ಡಾ. ನಿಹಾಲ್ ಕೊಠಾರಿ ಮಾಹಿತಿ ನೀಡಿದರು.

ಬಾಹುಬಲ್ ಜೈನ್, ನವೀನ ಖಿವೇಸ್ರಾ, ಜಿತೊ ಹುಬ್ಬಳ್ಳಿ ಸಂಚಾಲಕ ವಿಕ್ರಮ ಗುಲೇಚಾ ನೇತೃತ್ವದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅನೇಕರು, ಉಚಿತ ಆರೋಗ್ಯ ತಪಾಸಣೆಯ ಪ್ರಯೋಜನ ಪಡೆದುಕೊಂಡರು. ಅನಿಲಕುಮಾರ ಜೈನ್, ಸೋಹನ್ ಟೆಟೆಡ್, ಭರತ ಪಟ್ವಾರಿ, ಪರಸ ಪರ್ವರ, ಅಶೋಕ ಭಂಡಾರಿ, ಪ್ರವೀಣ ಚೌಧರಿ, ರಾಜನ್ ಜೈನ್, ಧಮೇಂದ್ರ ಜೈನ್, ಗೀತಾ ಛೇಡಾ, ಕವಿತಾ ಭಾಪಣಾ, ರೋಷನ ಟಟೆಡ್, ನೀರವ ಮೋಮಯ, ಮನೀಷ ಜೈನ್ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net