

ಮೈಸೂರು: ಶೃಂಗೇರಿ ಮಠದ ಭಾರತಿತೀರ್ಥ ಸ್ವಾಮೀಜಿ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವ ಪ್ರಯುಕ್ತ ಶೃಂಗೇರಿಯ ಶಾರದಾ ಪೀಠ ಹಾಗೂ ಜಿಲ್ಲಾ ಮತ್ತು ನಗರ ಬ್ರಾಹ್ಮಣ ಸಂಘದ ವತಿಯಿಂದ ಭಾನುವಾರ ಅಗ್ರಹಾರದ ಶಂಕರಮಠದಲ್ಲಿ ಆರೋಗ್ಯ ತಪಾಸಣಾ ಉಚಿತ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಎಎಸ್‌ಜಿ ಕಣ್ಣಿನ ಆಸ್ಪತ್ರೆ ಹಾಗೂ ಡಿ.ಆರ್.ಎಂ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಶಿಬಿರವನ್ನು ಶಾಸಕ ಟಿ.ಎಸ್.ಶ್ರೀವತ್ಸ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಚಾಲನೆ ನೀಡಿದರು.
ಸುಮಾರು 500ಕ್ಕೂ ಹೆಚ್ಚು ಭಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ಶಿಬಿರದ ಸದುಪಯೋಗವನ್ನು ಪಡೆದುಕೊಂಡರು. ಮಠದ ವ್ಯವಸ್ಥಾಪಕ ಶೇಷಾದ್ರಿ ಭಟ್, ಮೈಸೂರು ಜಿಲ್ಲಾ ಮತ್ತು ನಗರ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಗ್ರಾಮಾಂತರ ಬ್ರಾಹ್ಮಣ ಸಂಘದ ಅಧ್ಯಕ್ಷ ಗೋಪಾಲ್ ರಾವ್, ಮಠದ ಸ್ವಯಂ ಸೇವಕರಾದ ಹರೀಶ್, ಎಂ.ಆರ್.ಬಾಲಕೃಷ್ಣ, ಎಸ್.ರಂಗನಾಥ, ಶ್ರೀನಾಥ್, ಪ್ರಶಾಂತ್, ಮೀನಾಕ್ಷಿ, ಜ್ಯೋತಿ, ಬಾಬು, ಮಂಜುನಾಥ, ಸುಚೇಂದ್ರ ತೀರ್ಥ, ನಾಗಶ್ರೀ, ಗಣೇಶ್, ಸತ್ಯಪ್ರಕಾಶ್ ಇತರರಿದ್ದರು.