ವಿದ್ಯಾರ್ಥಿಗಳಲ್ಲಿ ಶಿಸ್ತು, ಉತ್ತಮ ನಡವಳಿಕೆ ಅಗತ್ಯ

13 Dwd 6
Published on

ಧಾರವಾಡ: ವಿದ್ಯಾರ್ಥಿಗಳು ಶಿಸ್ತು, ಉತ್ತಮ ನಡವಳಿಕೆಯೊಂದಿಗೆ ತಮ್ಮ ಜೀವನ ಶೈಲಿಯನ್ನು ರೂಪಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದು ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಗೌರವ ಕಾರ್ಯದರ್ಶಿ ಚಂದ್ರಕಾಂತ ಮಟ್ಟಿ ಹೇಳಿದರು.
ವಿಶ್ವ ತಂಬಾಕು ರಹಿತ ದಿನಾಚರಣೆ ಆಂಗವಾಗಿ ಎಲ್‌ಇಎ ಸಂಸ್ಥೆಯ ಅವ್ವಣ್ಣಪ್ಪ ಅತ್ತಿಗೇರಿ ಕೈಗಾರಿಕಾ ಸಂಸ್ಥೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಗುಟಕಾ ಮತ್ತು ತಂಬಾಕು ಸೇವನೆಯಂಥ ದುಶ್ಚಟಗಳ ದಾಸರಾಗಿ ಮರಣವನ್ನು ಆಹ್ವಾನಿಸುತ್ತಿದ್ದಾರೆ. ಅಂಥವರನ್ನು ಆಪ್ತ ಸಮಾಲೋಚನೆಗೊಳಪಡಿಸಿ ದುಶ್ಚಟ ಮುಕ್ತರನ್ನಾಗಿಸಬೇಕು ಎಂದರು.
ಪ್ರಾಚಾರ್ಯ ಎಸ್.ಎಂ. ಬಮ್ಮನಗೌಡರ, ಕಚೇರಿ ಅಧೀಕ್ಷಕ ಎಸ್.ಸಿ. ನೀಲಗುಂದ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ಪರಶುರಾಮ ಎ್.ಕೆ., ಜಿಲ್ಲಾ ಆಸ್ಪತ್ರೆಯ ಡೆಂಟಲ್ ಸರ್ಜನ್ ಡಾ. ರವಿ, ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಎಂ.ಐ. ಕಲ್ಲಪ್ಪನವರ, ಇತರರಿದ್ದರು. ನಾಗರಾಜ ಗೊಂದಿ ನಿರೂಪಿಸಿದರು. ಎಲ್.ಎಸ್. ತಳ್ಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net