ಇರುವೈಲು ದೇವಳದಲ್ಲಿ ಆರೋಗ್ಯ ತಪಸಣಾ ಶಿಬಿರ

New Project (23)
Published on

ಮೂಡುಬಿದಿರೆ: ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಆರೋಗ್ಯ ತಪಾಸಣಾ ಉಚಿತ ಶಿಬಿರವನ್ನು ದೇವಳದ ಪ್ರಧಾನ ಅರ್ಚಕ ರಾಘವೇಂದ್ರ ಆಸ್ರಣ್ಣ ಶನಿವಾರ ಉದ್ಘಾಟಿಸಿದರು.

ಪೂರ್ಣಾನಂದ ಸೇವಾ ಪ್ರತಿಷ್ಠಾನದ ಸಂಚಾಲಕ ರಮೇಶ್ ನಾಯಕ್, ಕಟೀಲು ಶ್ರೀ ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆ ಹಿರಿಯ ವೈದ್ಯರಾದ ಶಿವಾನಂದ, ಇರುವೈಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷೆ ಸುಜಾತಾ ಶೆಟ್ಟಿ, ಪೂರ್ಣಾನಂದ ಸೇವಾ ಪ್ರತಿಷ್ಠಾನ ಅಧ್ಯಕ್ಷ ಮುರಳೀಧರ್, ದ.ಕ. ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಸಂಘದ ಅಧ್ಯಕ್ಷ ದಯಾನಂದ ನಾಯಕ್ ಬೆಳ್ತಂಗಡಿ, ಫಲ್ಗುಣಿ ಯುವಕ ಮಂಡಲ ಅಧ್ಯಕ್ಷ ಪ್ರಭಾಕರ ಆಚಾರ್ಯ, ಗ್ರಾಪಂ ಸದಸ್ಯ ನಾಗೇಶ್ ಅಮೀನ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶುಭಕರ ಕಾಜವ, ಪೂವಪ್ಪ ಸಾಲ್ಯಾನ್, ಮೋಹನ್ ನಾಯಕ್ ಪಂಜ, ಪ್ರದೀಪ್ ಶೆಟ್ಟಿ, ಶಿವಾನಂದ ನಾಯ್ಕ ಕಟ್ಟಣಿಗೆ, ದೀಪಾ ದಿನೇಶ್, ವಾಸುದೇವ ಸಾಮಂತ್, ಕುಮಾರ್ ಪೂಜಾರಿ ಮತ್ತಿತರರಿದ್ದರು.

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಇರುವೈಲು, ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ, ದ.ಕ. ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ, ಬ್ರಾಹ್ಮಣ ಸಂಘ, ಶ್ರೀ ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆ ಕಟೀಲು, ಕೆ.ಎಂ.ಸಿ ಆಸ್ಪತ್ರೆ ಕಟೀಲು, ಫಲ್ಗುಣಿ ಯುವಕ ಮಂಡಲ ಇರುವೈಲು ಸಹಯೋಗದಲ್ಲಿ ಶಿಬಿತ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net