ಆರೋಗ್ಯ ತಪಾಸಣೆ ಶಿಬಿರ

Free health checkup camp at Thoravi on 27th
Published on

ಹುಬ್ಬಳ್ಳಿ : ಶ್ರೀ ನಿಜಗುಣ ಶಿವಯೋಗಿಗಳವರ 76ನೇ ವಾರ್ಷಿಕ ಜಯಂತಿ ಉತ್ಸವ ನಿಮಿತ್ತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ನ. 21ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಗರದ ಮಂಗಳವಾರ ಪೇಟೆಯ ರುದ್ರಾಕ್ಷಿಮಠದಲ್ಲಿ ಆಯೋಜಿಸಲಾಗಿದೆ.

ಡಾ. ಮಹೇಶ ನಾಲವಾಡ ಫೌಂಡೇಷನ್, ಡಾ. ಬಳಿಗಾರ ಹಾರ್ಟ್ ಕೇರ್ ಫೌಂಡೇಶನ್ ಹಾಗೂ ಹೆಗ್ಗೇರಿಯ ಅಭ್ಯುದಯ ವಿದ್ಯಾರ್ಥಿ ಸಂಘ ಆರ್ಯುವೇದ ಮಹಾವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿರುವ ಶಿಬಿರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಡಾ. ಮಹೇಶ ನಾಲವಾಡ, ಜಯಂತಿ ಉತ್ಸವದ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ ಹಾಗೂ ಮತ್ತಿತರರು ಪಾಲ್ಗೊಳ್ಳುವರು.

ಬಿ.ಪಿ., ಇ.ಸಿ.ಜಿ, ರಕ್ತ ತಪಾಸಣೆ, ಮಧುಮೇಹ ಕಾಯಿಲೆ ತಪಾಸಣೆ, ಮೂಲವ್ಯಾದಿ, ಎಲಬು ಸಾಂದ್ರತೆ, ಸ್ತ್ರೀ ರೋಗ ಸಮಸ್ಯೆ, ಕಿವಿ, ಮೂಗು ಸಮಸ್ಯೆ ಹಾಗೂ ಇತರ ರೋಗಗಳನ್ನು ಉಚಿತವಾಗಿ ತಪಾಸಣೆ ಮಾಡಲಾಗುವುದು. ಆಹಾರ ಪದ್ಧತಿ ಹಾಗೂ ತೂಕ ಇಳಿಸುವ ಬಗ್ಗೆ ತಿಳುವಳಿಕೆ ನೀಡಲಾಗುವುದು.

ವೈದ್ಯರಾದ ಡಾ. ಮಹೇಶ ನಾಲವಾಡ, ಡಾ. ಬಸವರಾಜ ಬಳಿಗಾರ, ಡಾ. ಪ್ರಭು ಬಿರಾದಾರ, ಡಾ. ಸಿದ್ದನಗೌಡ ಪಾಟೀಲ, ಡಾ. ಮಲ್ಲಿಕಾರ್ಜುನ ಬಾಳಿಕಾಯಿ, ಡಾ. ಅನೀತಾ ಹಲಗತ್ತಿ, ಡಾ. ಲಕ್ಷ್ಮೀ ಪಾಟೀಲ, ಡಾ. ಸವಿತಾ ಸಜ್ಜನ, ಡಾ. ಗಣೇಶ ಬಿ., ಡಾ. ರಾಜಶ್ರೀ ಸೂಜಿ, ಡಾ. ಶಿವಾನಂದ ಗಿರಿಮಲ್ಲ, ಡಾ. ಅಂಜಲಿ ನಾಯಕ, ಡಾ. ಹರ್ಷಿತಾ ಬಿ. ಉಪಸ್ಥಿತರಿರುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net