ಆರೋಗ್ಯ ತಪಾಸಣೆ ಶಿಬಿರ

Published on

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರ ಶಿರೂರ ಪಾರ್ಕ್ ನಲ್ಲಿರುವ ವೈದ್ಯರತ್ನಂ ಔಷಧಾಲಯ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆ. 11ರಂದು ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.

ನರದೌರ್ಬಲ್ಯ ಪರೀಕ್ಷೆ, ಪಾದಗಳಲ್ಲಿ ಉರಿಯುವಿಕೆ, ಸಂವೇದನಾ ಶಕ್ತಿ ಕುಂದುವಿಕೆ ಇತರ ಕಾಯಿಲೆಗಳ ಉಚಿತ ತಪಾಸಣೆ ನಡೆಸಲಾಗುವುದು. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕೆಂದು ಪ್ರಾಧ್ಯಾಪಕ ಡಾ. ಸಜ್ಜನ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net