

ಮದ್ದೂರು: ರೋಟರಿ ಮದ್ದೂರು, ಅನನ್ಯ ಹಾರ್ಟ್ ಸಂಸ್ಥೆ ಮಂಡ್ಯ, ರೆಡ್ ಕ್ರಾಸ್ ಮಂಡ್ಯ, ಮಂಡ್ಯ ಜಿಲ್ಲಾ ಸ್ತ್ರೀ ರೋಗ ಮತ್ತು ಪ್ರಸೂತಿ ವೈದ್ಯರುಗಳ ಸಂಘದ ವತಿಯಿಂದ ಅ.28 ರಂದು ಬೆಳಗ್ಗೆ 9 ಗಂಟೆಯಿಮದ ಮಧ್ಯಾಹ್ನ 2 ಗಂಟೆಯವರೆಗೆ ನಗರ ಜಿ.ಪಿ.ಎಸ್ ಕನ್ವೆನ್ನನ್ ಹಾಲ್ (ಕೆಮ್ಮಣ್ಣುನಾಲೆ ಸರ್ಕಲ್ ಬಳಿ) ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಅಧ್ಯಕ್ಷ ಬಿಂದಾಸ್ ಎಸ್.ಪಿ.ಶ್ರೀನಿವಾಸು, ಕಾರ್ಯದರ್ಶಿ ಮಂಜುನಾಥ್ ನಾಯ್ಡು ತಿಳಿಸಿದ್ದಾರೆ.
ಶಿಬಿರದಲ್ಲಿ ಶ್ವಾಸಕೋಸ ಪರೀಕ್ಷೆ, ಸಕ್ಕರೆ ಪ್ರಮಾಣ ಪರೀಕ್ಷೆ, ವೈದ್ಯರೊಂದಿಗೆ ಸಮಾಲೋಚನೆ, ಕಣ್ಣಿನ ತಪಾಸಣೆ, ಕ್ಯಾನ್ಸ್‌ರ್ ತಪಾಸಣೆ ಬಿ.ಪಿ. ಇನ್ನೂ ಮುಂತಾದ ಪರೀಕ್ಷೆಗಳನ್ನು ಮಾಡಲಾಗುವುದು ಹಾಗೂ ಮಹಿಳೆಯರಿಗೆ ಆರೋಗ್ಯ ಜಾಗೃತಿ ಹಾಗೂ ವಿಶೇಷ ತಪಾಸಣೆ ಹಮ್ಮಿಕೊಂಡಿದ್ದು ನಗರ ಮತ್ತು ಸುತ್ತಮುತ್ತಲ ಹಳ್ಳಿಗಳ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.