720 ಆರೋಗ್ಯ ಸಿಬ್ಬಂದಿಗೆ ಕರೊನಾ ಲಸಿಕೆ

_web 1
Published on

ಚಿಕ್ಕಮಗಳೂರು: ಜಿಲ್ಲೆಯ 10 ಕೇಂದ್ರಗಳಲ್ಲಿ ಆಶಾ, ಅಂಗನವಾಡಿ, ಕಿರಿಯ ಪುರುಷ, ಮಹಿಳಾ ಆರೋಗ್ಯ ಸಹಾಯಕರು ಸೇರಿ ಶುಕ್ರವಾರ ಒಂದೇ ದಿನ 720ಕ್ಕೂ ಹೆಚ್ಚು ಮಂದಿ ಕರೊನಾ ಲಸಿಕೆ ಹಾಕಿಸಿಕೊಂಡರು.

ತಾಲೂಕಿನ 220 ಆಶಾ ಕಾರ್ಯಕರ್ತೆಯರಲ್ಲಿ 180ಕ್ಕೂ ಹೆಚ್ಚು ಮಂದಿ ಕರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ. 4 ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯಕರ್ತೆಯರಿಗೆ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.

ಪಿಎಚ್​ಸಿ ವೈದ್ಯಾಧಿಕಾರಿ ಡಾ. ಪ್ರತ್ಯಕ್ಷ ಭೈರವ ಮಾತನಾಡಿ, ಕರೊನಾ ಸೋಂಕಿತರಿಗೆ ಧೈರ್ಯ ತುಂಬುವ ಜತೆ, ಜನರಲ್ಲಿ ಜಾಗೃತಿ ಮೂಡಿಸಿದ ಆಶಾ ಕಾರ್ಯಕರ್ತೆಯರು, ಕಿರಿಯ ಮಹಿಳಾ ಸಹಾಯಕಿಯರು, ಅಂಗನವಾಡಿ ಕಾರ್ಯಕರ್ತೆಯರು ಲಸಿಕೆಯನ್ನೂ ಹಾಕಿಸಿಕೊಂಡು ಜನರಿಗೆ ಧೈರ್ಯ ತುಂಬುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net