

ಯಲಬುರ್ಗಾ: ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯದ ಕಾಳಜಿ ವಹಿಸಬೇಕು ಎಂದು ಆಯುಷ್ ವೈದ್ಯಾಧಿಕಾರಿ ಡಾ.ವಿ.ಆರ್. ತಾಳಿಕೋಟಿ ಹೇಳಿದರು.
ತಾಲೂಕಿನ ಯಡ್ಡೋಣಿ ಆರೋಗ್ಯ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೌಷ್ಟಿಕ ಆಹಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಅವುಗಳ ಲಾಭ ಪಡೆಯಬೇಕು. ಮಕ್ಕಳು, ಗರ್ಭಿಣಿ, ಬಾಣಂತಿಯರು ಪೌಷ್ಟಿಕ ಆಹಾರ, ಮೊಳಕೆ ಕಾಳು, ಪೌಷ್ಟಿಕಾಂಶ ಆಹಾರ ಸೇವಿಸಬೇಕು ಎಂದರು.
ಎನ್‌ಎಸ್‌ವಿ, ಡೆಂೆ, ಮಲೇರಿಯಾ, ರಾಷ್ಟ್ರೀಯ ಹವಾಮಾನ ಮತ್ತು ಮಾನವ ಆರೋಗ್ಯ ಕಾರ್ಯಕ್ರಮ ಬಗ್ಗೆ ಜನರಿಗೆ ಅರಿವು ಮೂಡಸಲಾಯಿತು. ಆರೋಗ್ಯ ಇಲಾಖೆ ನೌಕರ ಮಲ್ಲಯ್ಯ, ಪ್ರಮುಖರಾದ ಗವಿಸಿದ್ದಯ್ಯ ಹಿರೇಮಠ, ಆದೇಶ ರೊಟ್ಟಿ, ಆಶಾ ಕಾರ್ಯಕರ್ತೆರಾದ ರೇಣುಕಾ, ಕಮಲಾಕ್ಷಿ, ಅಂಗನವಾಡಿ ಕಾರ್ಯಕರ್ತೆಯರಾದ ಹನುಮಕ್ಕ, ಪದ್ಮಾವತಿ, ಗರ್ಭಿಣಿ ಹಾಗೂ ಬಾಣಂತಿಯರು ಇದ್ದರು.