ಆರೋಗ್ಯ ಸೇವೆ ಎಲ್ಲರಿಗೂ ತಲುಪಬೇಕು

TKE hhh
ತರೀಕೆರೆ ತಾಪಂನಲ್ಲಿ ಆಯುಷ್ಮಾನ್‌ಭವ ಅಭಿಯಾನಕ್ಕೆ ಪುರಸಭೆ ಅಧ್ಯಕ್ಷ ಪರಮೇಶ್, ಡಾ. ಬಿ.ಜಿ.ಚಂದ್ರಶೇಖರ್ ಚಾಲನೆ ನೀಡಿದರು. ಆರ್.ಕುಮಾರಪ್ಪ, ಟಿ.ಜಿ.ಅಶೋಕ್‌ಕುಮಾರ್, ಕೆ.ಸಿ.ಜ್ಯೋತಿಲಕ್ಷ್ಮೀ, ಎಚ್.ಪ್ರಶಾಂತ್ ಇತರರಿದ್ದರು.
Published on

ತರೀಕೆರೆ: ಸರ್ಕಾರದ ಆರೋಗ್ಯ ಸೇವೆಯನ್ನು ಅಧಿಕಾರಿಗಳು ಪ್ರತಿಯೊಬ್ಬರಿಗೂ ತಲುಪಿಸಬೇಕು ಎಂದು ಪುರಸಭೆ ಅಧ್ಯಕ್ಷ ಪರಮೇಶ್ ಹೇಳಿದರು.

ತಾಪಂನಲ್ಲಿ ಬುಧವಾರ ತಾಲೂಕು ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಆಯುಷ್ಮಾನ್‌ಭವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಅನೈರ್ಮಲ್ಯದಿಂದ ಆರೋಗ್ಯ ಸಮಸ್ಯೆ ಉಲ್ಬಣಿಸುತ್ತಿದ್ದು, ಆರೋಗ್ಯ ಅಧಿಕಾರಿಗಳು, ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಸ್ವಚ್ಛತೆ ಅರಿವು ಮೂಡಿಸಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಬಿ.ಜಿ.ಚಂದ್ರಶೇಖರ್ ಮಾತನಾಡಿ, ಅ.2ರವರೆಗೆ ನಡೆಯಲಿರುವ ಆಯುಷ್ಮಾನ್‌ಭವ ಅಭಿಯಾನ ಅಸಾಂಕ್ರಾಮಿಕ ರೋಗ ಪತ್ತೆ ಹಚ್ಚಲು ನೆರವಾಗಲಿದೆ. ಅ.2ರಂದು ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮ ಮಟ್ಟದ ಸಭೆ ನಡೆಸಿ ತಜ್ಞ ವೈದ್ಯರಿಂದ ಪ್ರತಿಯೊಬ್ಬರಿಗೂ ಆರೋಗ್ಯ ತಪಾಸಣೆ ಮಾಡಿಸಲಾಗುವುದು. ಅಭಿಯಾನದಲ್ಲಿ ಅಂಗಾಂಗ ದಾನದ ಅರಿವು ಮೂಡಿಸಲಾಗುವುದು. ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಯಕ್ರಮದಲ್ಲಿ ಬಿಪಿಎಲ್ ಕುಟುಂಬಸ್ಥರಿಗೆ 5 ಲಕ್ಷ ರೂ. ವರೆಗೆ ಉಚಿತ, ಎಪಿಎಲ್ ಕುಟುಂಬಕ್ಕೆ ಸರ್ಕಾರ ನಿಗದಿಗೊಳಿಸಿರುವ 5 ಲಕ್ಷ ರೂ. ಮಿತಿಯ ಚಿಕಿತ್ಸಾ ವೆಚ್ಚದಲ್ಲಿ ಶೇ.70ರಷ್ಟನ್ನು ಮಾತ್ರ ಭರಿಸಲಿದೆ ಎಂದು ಮಾಹಿತಿ ನೀಡಿದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ಕುಮಾರಪ್ಪ, ಸದಸ್ಯರಾದ ಟಿ.ಜಿ.ಅಶೋಕ್‌ಕುಮಾರ್, ಚೇತನ್, ಮುಖ್ಯಾಧಿಕಾರಿ ಎಚ್.ಪ್ರಶಾಂತ್, ಸಿಡಿಪಿಒ ಕೆ.ಸಿ.ಜ್ಯೋತಿಲಕ್ಷ್ಮೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net