

ಉಗರಗೋಳ: ಪ್ರಸ್ತುತ ಒತ್ತಡದ ಬದುಕಿನಲ್ಲಿ ಮನುಷ್ಯ ಆರೋಗ್ಯದ ಬಗ್ಗೆ ಕಾಳಜಿ ವಹಿಸದ ಪರಿಣಾಮ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುವಂತಾಗಿದೆ ಎಂದು ಶ್ರೀ ೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಯೋಜನಾಧಿಕಾರಿ ಎಚ್.ಆರ್.ಲವಕುಮಾರ ಹೇಳಿದರು. ಗ್ರಾಮದ ಶ್ರೀ ರಾಮಾರೂಢ ಮಠದಲ್ಲಿ ಧಗ್ರಾಯೋ ಬಿ.ಸಿ ಟ್ರಸ್ಟ್ ಹಾಗೂ ಎಂ.ಎಂ.ಜೋಶಿ ಹಾಗೂ ವಿಜ್ಞಾನ ಸಂಸ್ಥೆ ಹುಬ್ಬಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಣ್ಣು ಹಾಗೂ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ಮಾತನಾಡಿದರು. ಸ್ಥಳಿಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜ್ಯೋತಿ ಬಸರಿ ಮಾತನಾಡಿ, ಯುವಕರು ದುಶ್ಚಟಗಳ ದಾಸರಾಗಿ ಅಮೂಲ್ಯ ಜೀವನ ಕಳೆದುಕೊಳ್ಳುತ್ತಿರುವುದು ಖೇದಕರ ಸಂಗತಿ. ಸಾರ್ವಜನಿಕರು ಆರೋಗ್ಯ ಉಚಿತ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಸ್ಥಳಿಯ ರಾಮಾರೂಢಮಠದ ಬ್ರಹ್ಮಾರೂಢ ಸ್ವಾಮೀಜಿ, ಡಾ.ಶಾನೂರ ದೇದಾರ, ಒಕ್ಕೂಟದ ಅಧ್ಯೆ ನಿಂಗಮ್ಮ ಹಳ್ಳಿ, ಶಂಕ್ರೆಮ್ಮ ಮುದ್ರಗಣಿ, ಎನ್.ಎ.ಪೂಜೇರ, ಸುಬ್ರಾಯ ನಾಯ್ಕ, ಮಮತಾ ವೈದ್ಯ, ನಿರ್ಮಲಾ ಕಳಸನಗೌಡರ, ಪೂಜಾ ಸೋಮನ್ನವರ, ಅಶ್ವಿನಿ ಬಾವಿಕಟ್ಟಿ, ಗಂಗಮ್ಮ ಮಡಿವಾಳರ, ಶಿಲ್ಪಾ ಕುರಿ, ನೀಲಮ್ಮ ಜ್ಯೋತೆನ್ನವರ, ಸುಶ್ಮಿತಾ ನರಗುಂದ, ಮಡಿವಾಳಪ್ಪ ತೇಗೂರ, ಭಾಗ್ಯ ಹನಶಿ ಇತರರಿದ್ದರು.