ಆರೋಗ್ಯ ಸೇವೆ ಬಡವರಿಗೆ ತಲುಪಬೇಕು

18ark2
Published on

ಅರಕಲಗೂಡು: ಇಲ್ಲಿನ ಸರ್ಕಾರಿ ಆಸ್ಪತ್ರೆ, ಹಾಸನ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಮತ್ತು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಗೊರೂರಿನ ಅಂಬೇಡ್ಕರ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಇತ್ತೀಚೆಗೆ ಆರೋಗ್ಯ ಉಚಿತತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

ಸರ್ಕಾರಿ ಆಸ್ಪತ್ರೆಯ ಐಸಿಟಿಸಿ ಆಪ್ತಸಮಾಲೋಚಕ ಪರಶುರಾಮ ಶಿರೂರ ಮಾತನಾಡಿ, ಬಡ ಜನರಿಗೆ ಸರ್ಕಾರದ ಆರೋಗ್ಯ ಸೇವೆಗಳು ತಲುಪುವಂತಾಗಬೇಕು ಎಂದರು.

ಎನ್‌ಸಿಡಿ ವಿಭಾಗದ ಆಪ್ತ ಸಮಾಲೋಚಕ ಉಮೇಶ ಮಾತನಾಡಿ, ಮಧುಮೇಹ ಮತ್ತು ಅಧಿಕರಕ್ತದೊತ್ತಡ ಕಾಯಿಲೆಗಳು ಬಾರದಂತೆ ಮುನ್ನೆಚರಿಕಾ ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.

ಹಾಸನ ತಾಲೂಕು ಕ್ಷಯರೋಗ ವಿಭಾಗದ ಕುಮಾರ, ಎಸ್‌ಟಿಡಿ ವಿಭಾಗದ ಪ್ರಕಾಶ, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಹರೀಶ, ಸದಸ್ಯರಾದ ಶಿವರಾಜ್, ರಾಣಿ, ಡಾ. ಮಧುಸೂದನ್, ಡಾ. ಮೊಹಮ್ಮದ ಸಲ್ಮಾನ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಕಾಂತಾಮಣಿ, ಗೌರಮ್ಮ, ಅರುಣಕುಮಾರ, ಲಲಿತಾ, ಹೇಮಕುಮಾರಿ, ಭಾನುಮತಿ, ನಾಗಮ್ಮ, ಆಶಾ ಕಾರ್ಯಕರ್ತೆಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net