ಕಾಲಕಾಲಕ್ಕೆ ಆರೋಗ್ಯದ ಕಾಳಜಿ ಅವಶ್ಯ

05 hkr 03 ABHIYANA
Published on

ಹಿರೇಕೆರೂರ: ಇಂದು ಎಲ್ಲರಿಗೂ ಆರೋಗ್ಯವೇ ಭಾಗ್ಯವಾಗಿದ್ದು, ಕಾಲ ಕಾಲಕ್ಕೆ ದೇಹಾರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ಜೆಎಂಎಫ್​ಸಿ ನ್ಯಾಯಾಲಯದ ಹಿರಿಯ ದಿವಾಣಿ ನ್ಯಾಯಾಧೀಶ ವೈ.ಕೆ. ಬೇನಾಳ ಹೇಳಿದರು.

ಪಟ್ಟಣದ ಕೋರ್ಟ್​ನ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನೆ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನಾ ಇಲಾಖೆಗಳ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಪೋಷಣಾ ಅಭಿಯಾನ, ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪೌಷ್ಟಿಕಾಂಶವುಳ್ಳ ಅಹಾರಗಳನ್ನು ಸೇವಿಸಬೇಕು. ಆರೋಗ್ಯದ ಬಗ್ಗೆ ಇಂದು ಯಾವುದನ್ನು ಹಗುರವಾಗಿ ಪರಿಗಣಿಸದೆ, ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಹತ್ತಿರದ ವೈದ್ಯರ ಬಳಿ ತಪಾಸಿಸಿಕೊಳ್ಳಬೇಕು ಎಂದರು.

ದಿವಾಣಿ ನ್ಯಾಯಾಧೀಶೆ ನಾಗರತ್ನಮ್ಮ ಮಾತನಾಡಿ, ಇಂದು ಅಹಾರ, ಧಾನ್ಯಗಳು ಸೇರಿ ಎಲ್ಲದರಲ್ಲಿ ಕಲಬೆರಕೆಯಾಗುತ್ತಿದ್ದು, ವಿಷಪೂರಿತ ಅಹಾರ ದೇಹದಲ್ಲಿ ಸೇರಿಕೊಳ್ಳುತ್ತಿದೆ. ಈ ಬಗ್ಗೆ ಹೆಚ್ಚಿನ ಜಾಗ್ರತಿ ವಹಿಸಿ, ಉತ್ತಮ ಗುಣಮಟ್ಟದ ಪೌಷ್ಟಿಕಾಂಶವುಳ್ಳ ಅಹಾರ ಸೇವಿಸಬೇಕು ಎಂದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ರವಿ ಗಾಣಿಗೇರ ಅಧ್ಯಕ್ಷತೆ ವಹಿಸಿದ್ದರು. ವಕೀಲರಾದ ಕೆ.ಬಿ. ಬಾಳಿಕಾಯಿ, ದುರ್ಗೆಶ ತಿರಕಪ್ಪನವರ, ಎಸ್.ಬಿ. ತಿಪ್ಪಣ್ಣನವರ, ಸಿಡಿಪಿಒ ಜಯಶ್ರೀ ಪಾಟೀಲ, ಎಸಿಡಿಪಿಒ ಗೀತಾ ಬಾಳಿಕಾಯಿ ಹಾಗೂ ವಕೀಲರ ಸಂಘದ ಪದಾಧಿಕಾರಿಗಳು, ವಕೀಲರು, ಅಭಿಯೋಜನೆ ಇಲಾಖೆಯ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net