

ವಿಜಯಪುರ: ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿರುವ ಬಿಎಲ್ಡಿಇ ಆಸ್ಪತ್ರೆಯ ಕಾರ್ಯ ಶ್ಲಾನೀಯ ಎಂದು ಬಿಜ್ಜರಗಿ ಗ್ರಾ.ಪಂ. ಮಾಜಿ ಅಧ್ಯ ಸುಭಾಷಗೌಡ ಪಾಟೀಲ ಹೇಳಿದರು.
ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಎಲ್ಡಿಇ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಉಪಕೇಂದ್ರ ಹಾಗೂ ಗ್ರಾ.ಪಂ. ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಉಚಿತ ಶಿಬಿರದಲ್ಲಿ ಅವರು ಮಾತನಾಡಿದರು.
ಬಿಎಲ್ಡಿಇ ಸಂಸ್ಥೆಯ ಅಧ್ಯ, ಸಚಿವ ಎಂ.ಬಿ. ಪಾಟೀಲರ ಜನಪರ ಕಾಳಜಿಯಿಂದಾಗಿ ತ ವೈದ್ಯರು ಗ್ರಾಮೀಣ ಭಾಗಕ್ಕೆ ಬಂದು ಆರೋಗ್ಯ ತಪಾಸಣೆ ಉಚಿತವಾಗಿ ಮಾಡುತ್ತಿದ್ದಾರೆ. ಬಡ ಜನರಿಗೂ ಆರೋಗ್ಯ ಸೇವೆ ಸಿಗುವಂತಾಗಿದೆ ಎಂದರು.
ಸಾಮಾಜಿಕ ಕಾರ್ಯಕರ್ತ ಪ್ರೀತು ದಶವಂತ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಆಯೋಜಿಸಿದ ಆರೋಗ್ಶ ತಪಾಸಣೆ ಉಚಿತ ಶಿಬಿರಗಳು ಬಡಜನರಿಗೆ ಜೀವ ಉಳಿಸುವ ಸಂಜಿವಿನಿಯಾಗಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಸ್ಪತ್ರೆ ಆಡಳಿತಾಧಿಕಾರಿ ಶಾಂತೇಶ ಸಲಗರೆ ಮಾತನಾಡಿ, ಬಿಎಲ್ಡಿಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯು ಉತ್ತಮ ವೈದ್ಯಕಿಯ ಸೇವೆ ನೀಡುತ್ತಿದೆ.
ಆರೋಗ್ಯಕ್ಕೆ ಸಂಬಂಧಿಸಿದಂತೆ ಎಲ್ಲ ಯಂತ್ರೋಪಕರಣ ಹೊಂದಿದೆ. ತ ವೈದ್ಯರು ಮತ್ತು ನುರಿತ ಸುಶ್ರೂಷಕ ಸಿಬ್ಬಂದಿ ಸದಾ ಸೇವಾಭಾವದಿಂದ ಕಾರ್ಯ ನಿರ್ವಹಿಸುತ್ತಾರೆ. ಸಚಿವ ಎಂ.ಬಿ. ಪಾಟೀಲರ ಆಶಯದಂತೆ ಈ ಭಾಗದ ಜನರಿಗೆ ಆಸ್ಪತ್ರೆ ವರದಾನವಾಗಿದೆ ಎಂದು ಹೇಳಿದರು.
ಶಿಬಿರದಲ್ಲಿ 35 ಜನರಿಗೆ ಹೃದ್ರೋಗ, 30 ಜನರಿಗೆ ಮೂತ್ರಜನಕಾಂಗ, 35 ಜನರಿಗೆ ನರರೋಗ, 463 ಚಿಕ್ಕಮಕ್ಕಳು ಹಾಗೂ 63 ಜನರಿಗೆ ವೈದ್ಯಕಿಯ ತಪಾಸಣೆ ನಡೆಸಲಾಯಿತು. ಅಲ್ಲದೆ, 70ಕ್ಕೂ ಹೆಚ್ಚು ಜನರಿಗೆ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಬಿಎಲ್ಡಿಇ ಆಸ್ಪತ್ರೆಗೆ ಶಿಫಾರಸು ಮಾಡಲಾಯಿತು.
ವೈದ್ಯರಾದ ಡಾ. ರಾಮಕೃಷ್ಣ, ಡಾ. ನವಾಜಮ, ಡಾ. ಸಿದ್ಧಾರ್ಥ, ಡಾ. ಮಹೇಶ ಪಾಟೀಲ, ಗ್ರಾ.ಪಂ. ಅಧ್ಯೆ ಲಕ್ಷಿ$್ಮಬಾಯಿ ಖ್ಶಾತನ, ಉಪಾಧ್ಯೆ ಲಕ್ಕವ್ವ ಧನಗೊಂಡ, ವೈದ್ಯಾಧಿಕಾರಿ ಡಾ. ಅಶೋಕ ಪಟ್ಟಣಶೆಟ್ಟಿ, ಪಿಡಿಒ ಜಯಲಕ್ಷಿ$್ಮ ದಶವಂತ, ಮುಖಂಡರಾದ ಮಲ್ಲಿಕಾರ್ಜುನ ಗುಣಕಿ, ಬಸವರಾಜ ಸವದಿ, ಆನಂದ ಹೊಸಮನಿ, ಶಿವಾನಂದ ಮಸಳಿ, ಚನ್ನಪ್ಪ ಸಿದ್ದನಾಥ, ಶರಣಪ್ಪ ತಿಕೋಟಾ, ಶಿವಪ್ಪ ಮಸಳಿ, ರಮೇಶ ಮಗದಾರೆ ಮತ್ತಿತರರಿದ್ದರು.